ರಾಕೇಶ್ ಕುಮಾರ್ ರೈ
ಸ್ವಾತಂತ್ರ್ಯ ಸಿಗಬೇಕಾದರೆ ಸ್ವಾತಂತ್ರ್ಯ ಹೋರಾಟಗಾರರು ಅದೆಷ್ಟು ಕಷ್ಟಪಟ್ಟಿದ್ದಾರೆ. ಅವರು ಹೋರಾಡಿದ ಪರಿಣಾಮವಾಗಿ ನಮ್ಮನ್ನು ಬ್ರಿಟಿಷರು ಬಿಟ್ಟು ಹೋದರು. ಆದರೆ ಇನ್ನೂ ಒಂದರ್ಥದಲ್ಲಿ ಸ್ವಾತಂತ್ರ್ಯ ಸಿಗಲು ಬಾಕಿ ಇದೆ. ಸುಳ್ಳು ಪ್ರಪಂಚದಲ್ಲಿ ಸ್ವಾತಂತ್ರ್ಯ ಎಲ್ಲಿ ಸಿಗಬೇಕು ಅಂತ ನಮಗೆ ಗೊತ್ತೇ ಇಲ್ಲ. ನಾವು ಈಗಿನ ಸಮಾಜದಲ್ಲಿ ಕಣ್ಣು ಮುಚ್ಚಿಕೊಂಡು ಬದುಕುತ್ತಿದ್ದೇವೆ. ಸುಳ್ಳನ್ನು ಸತ್ಯ ಎಂದು ನಂಬಿಕೊಂಡಿದ್ದೇವೆ. ಆಡಳಿತದಲ್ಲಿ ಕೆಲವು ಅಭಿವೃದ್ಧಿಯನ್ನು ಮಾಡಿದ್ದರೂ ಕೂಡ ಗಾಂಧೀಜಿಯ ಕನಸು ಇನ್ನೂ ಕೂಡ ನನಸಾಗಿಲ್ಲ. ಕೆಲವು ಕಾಲೇಜಿನ ಯುವಕರನ್ನು ನಿದ್ದೆ ಮಾಡುವ ಹಾಗೆ ಮಾಡುತ್ತಿದ್ದಾರೆ.
ನಮ್ಮ ದೇಶದಲ್ಲಿ ಯುವಕರು ಹೆಚ್ಚು ಇರುವುದರಿಂದ ಯಾವತ್ತೋ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಿತ್ತು. ಕೆಲವರು ಮಾಡುವ ಭಾಷಣದಿಂದ ನಮ್ಮನ್ನು ನಿಂದಿಸುತ್ತಿದ್ದಾರೆ. ಮತ್ತು ನಮ್ಮ ದೇಶದಲ್ಲಿ ಹಲವಾರು ವಿಷಯಗಳಲ್ಲಿ ಸ್ವಾತಂತ್ರ್ಯ ಸಿಗಬೇಕು. ನಮ್ಮ ದೇಶ ಪ್ರಜಾಪ್ರಭುತ್ವ. ಆದ್ದರಿಂದ ಅನ್ಯಾಯವಾಗುವ ಜಾಗದಲ್ಲಿ ಧ್ವನಿ ಎತ್ತಬೇಕು. ಸ್ವಾರ್ಥವನ್ನು ನೋಡಬೇಡಿ. ಅನ್ಯಾಯ, ಅಧರ್ಮ ಸೃಷ್ಟಿಯಾದಾಗ ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ಯುವಕರಲ್ಲಿ ಇದೆ. ಕ್ರಾಂತಿಕಾರಿಯ ಮನೋಭಾವನೆ ಬೆಳೆಯಬೇಕು.
ನಾವು ಯಾರಿಗೂ ಕೂಡ ಹೆದರಿ ಬದುಕಬೇಕಾದ ಅವಶ್ಯಕತೆ ಇಲ್ಲ. ನಮ್ಮ ಸಮಾಜದಲ್ಲಿ ಅನ್ಯಾಯ ಅಧರ್ಮವಾದ ಜಾಗದಲ್ಲಿ ಧ್ವನಿ ಎತ್ತಿ. ಆಗ ಮಾತ್ರ ಸ್ವಾತಂತ್ರ್ಯ ಎನ್ನುವುದು ಸಿಗುವುದು.
0 comments:
Post a Comment