ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಕೀಲರ ಹುದ್ದೆ ತುಂಬಲು ಕ್ರಮ : ಆಸಕ್ತ ನ್ಯಾಯವಾದಿಗಳಿಂದ ಅರ್ಜಿ ಅಹ್ವಾನ - Karavali Times ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಕೀಲರ ಹುದ್ದೆ ತುಂಬಲು ಕ್ರಮ : ಆಸಕ್ತ ನ್ಯಾಯವಾದಿಗಳಿಂದ ಅರ್ಜಿ ಅಹ್ವಾನ - Karavali Times

728x90

2 June 2023

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಕೀಲರ ಹುದ್ದೆ ತುಂಬಲು ಕ್ರಮ : ಆಸಕ್ತ ನ್ಯಾಯವಾದಿಗಳಿಂದ ಅರ್ಜಿ ಅಹ್ವಾನ

ಮಂಗಳೂರು, ಜೂನ್ 02, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಕೀಲರ ಹುದ್ದೆಯನ್ನು ಹೊಸದಾಗಿ ತುಂಬಲು ರಾಜ್ಯ ಸರಕಾರ ನಿರ್ಧರಿಸಿದ್ದು, ಆಸಕ್ತ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ನಗರದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿಯ ಕಾನೂನು ಶಾಖೆಯಲ್ಲಿ ಅರ್ಜಿ ಪಡೆದು, ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ಜಾತಿ, ವರ್ಗ ಮತ್ತು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿರುವ, ನ್ಯಾಯಾಲಯದಲ್ಲಿ ವಕಾಲತ್ತು ಮಾಡಿರುವ ಅನುಭವವುಳ್ಳ ವಿವಿಧ ರೀತಿಯ ಕ್ಲಿಷ್ಟಕರ ಮತ್ತು ಸಂಕೀರ್ಣ ವಿಚಾರಗಳನ್ನು ಒಳಗೊಂಡ ವಿವರ, ಅವಧಿ ಮತ್ತು ಅನುಭವಗಳ ಬಗ್ಗೆ ಪುರಾವೆಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು.

ವಿಶೇಷ ಅರ್ಹಹತೆಗಳಿದ್ದರೆ ದಾಖಲೆಗಳನ್ನು ಲಗತ್ತಿಸಬೇಕು. 2023ರ ಜೂನ್ 15ರೊಳಗೆ ಅರ್ಜಿಯನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ತಲುಪಿಸಬೇಕು. ನಂತರ ಬಂದ ಅರ್ಜಿಗಳು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಕೀಲರ ಹುದ್ದೆ ತುಂಬಲು ಕ್ರಮ : ಆಸಕ್ತ ನ್ಯಾಯವಾದಿಗಳಿಂದ ಅರ್ಜಿ ಅಹ್ವಾನ Rating: 5 Reviewed By: karavali Times
Scroll to Top