ಸೂರಿಲ್ಲದ 71 ರ ವಯೋವೃದ್ದೆಗೆ ಸಿದ್ದು ಸರಕಾರ ಹಾಗೂ ಸಹೃದಯೀ ಬಾಂಧವರು ಸಹಕರಿಸುವಂತೆ ಮನವಿ
ಕಾರವಾರ, ಜುಲೈ 08, 2023 (ಕರಾವಳಿ ಟೈಮ್ಸ್) : ಜಿಲ್ಲೆಯ ಯೆಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾವಟ್ಟಿ ಗ್ರಾಮದ 71 ವರ್ಷದ ಹಿರಿಯ ಜೀವವೊಂದು ಜೀವಿಸಲು ಸೂಕ್ತವಾದ ಸೂರಿಲ್ಲದೆ ಅತ್ತ ನೋಡಿಕೊಳ್ಳಲು ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ದಿನದೂಡುತ್ತಿರುವ ಅತ್ಯಂತ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
71 ರ ಹರೆಯದ ವಿಜಯಲಕ್ಷ್ಮಿ ಭಾಗವತ್ ಎಂಬ ಅಜ್ಜಿಯ ಕಥೆ ಇದು. ಕಳೆದ ಐದು ವರ್ಷದ ಹಿಂದೆ ಪತಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಈ ಲೋಕಕ್ಕೆ ವಿದಾಯ ಹೇಳಿದ್ದು, ಪುತ್ರಿ ವಿವಾಹವಾಗಿ ಕೌಟುಂಬಿಕ ಸಮಸ್ಯೆಯಿಂದಾಗಿ ತಾಯಿಯ ಸಹಾಯಕ್ಕೆ ಬರಲಾರದ ಪರಿಸ್ಥಿತಿಯಲ್ಲಿರುವ ಈ ಅಜ್ಜಿ ಮುರುಕಲು ಗುಡಿಸಲಿನಲ್ಲಿ ಕಳೆದ ಕೆಲ ವರ್ಷಗಳಿಂದ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ಕಣ್ಣು ಕೂಡಾ ಕಾಣದ ಪರಿಸ್ಥಿತಿಯಲ್ಲಿರುವ ಈ ಬಡಪಾಯಿ ಅಜ್ಜಿಯ ಮುರುಕಲು ಗುಡಿಸಲಿನಲ್ಲಿ ಹಾವು, ಇಲಿ, ಹೆಗ್ಗಣಗಳೂ ಕೂಡಾ ಆವಾಸ ಹೂಡತ್ತಿವೆ. ಇತ್ತೀಚೆಗೆ ಈ ಅಜ್ಜಿಯ ಮನೆಯಲ್ಲಿ ಬೀಡು ಬಿಟ್ಟಿದ ವಿಷಪೂರಿತ ಹಾವೊಂದನ್ನು ಸ್ಥಳೀಯರು ಸೇರಿ ಹೊರಗಟ್ಟಿದ್ದರು.
ಏಕಾಂಗಿಯಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಈ ಅಜ್ಜಿಗೆ ಸೂಕ್ತ ಸೂರು ಹಾಗೂ ಪೆÇೀಷಣೆಗೆ ಬೇಕಾದ ಸಹಾಯ-ಸಹಕಾರ ನೀಡುವಂತೆ ಸ್ಥಳೀಯ ರಾಜಕೀಯ ನಾಯಕರುಗಳ ಬಳಿ ಸಾಕಷ್ಟು ಬಾರಿ ಅಂಗಲಾಚಲಾಗಿದ್ದರೂ ಇಂದು-ನಾಳೆ ಎಂಬ ಭರವಸೆ ಮಾತ್ರ ದೊರೆಯುತ್ತಿದೆಯಲ್ಲದೆ ಇನ್ನೇನೂ ಪರಿಹಾರ ಕಂಡಿಲ್ಲ.
ಇದೀಗ ಈ ಅಜ್ಜಿ ಸರಕಾರ ಹಾಗೂ ಖಾಸಗಿ ವ್ಯಕ್ತಿಗಳ ಸಹಾಯವನ್ನು ಅಂಗಲಾಚುತ್ತಿದ್ದಾರೆ. ವಾಸಿಸಲು ಸಮರ್ಪಕ ಸೂರು ಮೊದಲ ಆದ್ಯತೆಯಾಗಿದ್ದು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಘೋಷ ವಾಕ್ಯದಡಿ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಈ ಅಜ್ಜಿಯ ಕಥೆಯನ್ನು ನೇರವಾಗಿ ಮುಖತಃ ಕಂಡು ಪರಿಶೀಲನೆ ನಡೆಸಿ ಈ ಅಜ್ಜಿಯ ನರಕಯಾತನೆಗೆ ಶೀಘ್ರ ಇತಿಶ್ರೀ ಹಾಡಬೇಕಿದೆ. ಸುವರ್ಣ ಕರ್ನಾಟಕದಲ್ಲೂ ಇಂತಹ ಮನಕಲಕುವ ರೀತಿಯಲ್ಲಿ ವೃದ್ದೆ ತಾಯಿಯೋರ್ವರು ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂದರೆ ನಂಬಲೇ ಸಾಧ್ಯವಾಗುತ್ತಿಲ್ಲ ಎಂಬುದು ಈ ಅಜ್ಜಿಯನ್ನು ಕಣ್ಣಾರೆ ಕಂಡವರು ಹೇಳಿಕೊಳ್ಳುತ್ತಾರೆ.
ತಕ್ಷಣ ಸರಕಾರ ಹಾಗೂ ಸರಕಾರೇತರ ಸಮಾಜ ಸೇವಾ ಸಂಸ್ಥೆಗಳು ಈ ಅಜ್ಜಿಯ ದಯನೀಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಸೂಕ್ತ ವ್ಯವಸ್ಥೆ ಮಾಡುವುದರ ಜೊತೆ ಇವರ ಬಡತನಕ್ಕೆ ಸಹಕರಿಸಬೇಕಾಗಿದೆ.
ಈ ಅಜ್ಜಿಯ ಕರುಣಾಜಕನ ಪರಿಸ್ಥಿತಿಗೆ ಮರುಗುವ ಹೃದಯ ವೈಶಾಲ್ಯ ಇರುವವರು ಬ್ಯಾಂಕ್ ಖಾತೆ ಸಂಖ್ಯೆ 3219101011691 IFSC Code : CNRB00003219 ಅಥವಾ ಗೂಗಲ್ ಪೇ, ಫೆÇೀನ್ ಪೇ ಸಂಖ್ಯೆ 9880621335 ಗೆ ಸಹಾಯ ಹಸ್ತ ಚಾಚಬಹುದು.
0 comments:
Post a Comment