ಬಿ.ಸಿ.ರೋಡು : ಪೊಲೀಸ್ ಸಿಬ್ಬಂದಿಯ ಕುಟುಂಬವನ್ನೇ ಯಾಮರಿಸಿದ “ಅನೈತಿಕ ಪೊಲೀಸರು” - Karavali Times ಬಿ.ಸಿ.ರೋಡು : ಪೊಲೀಸ್ ಸಿಬ್ಬಂದಿಯ ಕುಟುಂಬವನ್ನೇ ಯಾಮರಿಸಿದ “ಅನೈತಿಕ ಪೊಲೀಸರು” - Karavali Times

728x90

28 July 2023

ಬಿ.ಸಿ.ರೋಡು : ಪೊಲೀಸ್ ಸಿಬ್ಬಂದಿಯ ಕುಟುಂಬವನ್ನೇ ಯಾಮರಿಸಿದ “ಅನೈತಿಕ ಪೊಲೀಸರು”

ಅನೈತಿಕ ಗೂಂಡಾಗಿರಿ ಸಹಿಸಲ್ಲ ಎಂದ ಸರಕಾರದ ಅವಧಿಯಲ್ಲಿ ಗೃಹ ಸಚಿವರಿಗೇ ಸವಾಲೆಸೆದ ಕಿಡಿಗೇಡಿಗಳು : ಇನ್ನೂ ಕಠಿಣ ಕ್ರಮ ಇಲ್ಲವೇ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು


ಬಂಟ್ವಾಳ, ಜುಲೈ 28, 2023 (ಕರಾವಳಿ ಟೈಮ್ಸ್) : ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬವನ್ನೇ ನೈತಿಕ ಪೊಲೀಸ್ ಗಿರಿ ನಡೆಸಲು ಪ್ರಯತ್ನಿಸಿದ ಇಬ್ಬರು ಕಿಡಿಗೇಡಿಗಳು ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಘಟನೆ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಆರೋಪಿಗಳಾದ ಮನೀಶ್ ಮತ್ತು ಮಂಜುನಾಥ ಎಂಬವರನ್ನು ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ. 

ಗುರುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಪೊಲೀಸ್ ಸಿಬ್ಬಂದಿ ಕುಮಾರ್ ಅವರು ತನ್ನ ಪತ್ನಿ ಹಾಗೂ ನಾದಿನಿ ಜೊತೆಗೆ ಬಿ ಸಿ ರೋಡಿನ ಆನಿಯಾ ದರ್ಬಾರ್ ಹೋಟೆಲಿನಲ್ಲಿ ಊಟ ಮುಗಿಸಿ ಹೊರಬರುತ್ತಿದ್ದಂತೆ  ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಪೆÇಲೀಸ್ ವಸತಿಗೃಹದ ಪರಿಸರದಲ್ಲಿ ಕುಮಾರ್  ತನ್ನ ಮನೆಯವರನ್ನು ವಸತಿ ಗೃಹಕ್ಕೆ ಕಳುಹಿಸಿ ಕರ್ತವ್ಯದ ಮೇರೆಗೆ ವಾಪಸ್ ಬರುತ್ತಿದ್ದಾಗ ಸಿಬ್ಬಂದಿ ಕುಮಾರ್ ಅವರನ್ನು ಅಡ್ಡಗಟ್ಟಿ ನಿನಗೆ ಯುವತಿಯರೊಂದಿಗೆ ಏನು ಕೆಲಸ ಎಂದು ಅವಾಚ್ಯ ಶಬ್ದಗಳಿಂದ  ಬೈದು ಅನೈತಿಕ ಪೊಲೀಸ್ ಗಿರಿ ತೋರಿದ್ದಾರೆ. ಈ ಸಂದರ್ಭ ಕುಮಾರ್ ಅವರು ನಾನು ಪೊಲೀಸ್ ಸಿಬ್ಬಂದಿ ಹಾಗೂ ನನ್ನ ಜೊತೆಯಲ್ಲಿದ್ದದ್ದು ನನ್ನ ಪತ್ನಿ ಹಾಗೂ ನಾದಿನಿ ಎಂದು ಹೇಳಿದರೂ ಕೇಳದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಗೂಂಡಾಗಿರಿ ಮೆರೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸ್ಥಳಕ್ಕೆ ಬಂದ ಕುಮಾರ್ ಅವರ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗಳು ಕಿರುಕುಳ ನೀಡಿದ್ದಾರಲ್ಲದೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. 

ಈ ಬಗ್ಗೆ ಪೊಲೀಸ್ ಸಿಬ್ಬಂದಿ ಕುಮಾರ್ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಮನೀಶ್ ಹಾಗೂ ಮಂಜುನಾಥ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಐ ಪಿ ಸಿ ಕಲಂ 341, 504, 0354(ಡಿ),354(ಎ), ಆರ್ ಡಬ್ಲ್ಯು 34 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅನೈತಿಕ ಪೊಲೀಸ್ ಗಿರಿ ನಡೆಸುವ ಕಿಡಿಗೇಡಿಗಳು ಅಮಾಯಕ ಬಡಪಾಯಿಗಳನ್ನು ದಬಾಯಿಸಿ ಕಠಿಣ ಕ್ರಮದ ಭಯವಿಲ್ಲದೆ ಇದೀಗ ಪೊಲೀಸರನ್ನೇ ಗುರಿಯಾಗಿಸಿ ಯಾಮಾರಿಸಲು ಹೊರಟಿರುವುದು ನಾಗರಿಕ ಸಮಾಜದ ಆತಂಕಕ್ಕೆ ಕಾರಣವಾಗಿದೆ. ಸದ್ಯ ಅಧಿಕಾರಕ್ಕೇರುವ ಪೂರ್ವದಲ್ಲಿ ನೈತಿಕ ಪೊಲೀಸ್ ಗಿರಿ ಸಹಿಸಲು ಸಾಧ್ಯವೇ ಇಲ್ಲ ಎಂದು ಅಧಿಕಾರಕ್ಕೇರಿದ ಸಿದ್ದು ಸರಕಾರದ ಪೊಲೀಸರು ತಮ್ಮ ಕಾಲಡಿಗೆ ಬಂದ ನೀರನ್ನು ಯಾವ ಕಠಿಣ ಕ್ರಮದ ಮೂಲಕ ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಪೊಲೀಸ್ ಸಿಬ್ಬಂದಿಯ ಕುಟುಂಬವನ್ನೇ ಯಾಮರಿಸಿದ “ಅನೈತಿಕ ಪೊಲೀಸರು” Rating: 5 Reviewed By: karavali Times
Scroll to Top