ಬಂಟ್ವಾಳ, ಜುಲೈ 03, 2023 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಮುಂಗಾರು ಬಿರುಸುಗೊಂಡಿದ್ದು, ಕೆಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿವೆ. ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ಗಂಗಾಧರ ಮನೆಯ ಕೊಟ್ಟಿಗೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹಾನಿಯಾಗಿದೆ.
ಮಾಣಿ ಗ್ರಾಮದ ಮಾಣಿ ಕೋಡಿ ನಿವಾಸಿ ಎಂ ಜಿ ಬಾಬು ನಲ್ಕೆ ಬಿನ್ ಗಂಗಯ್ಯ ನಲ್ಕೆ ಅವರ ವಾಸ್ತವ್ಯದ ಹಳೆಯ ಮನೆಗೆ ತೀವ್ರ ಹಾನಿಯಾಗಿದೆ. ಪೆರಾಜೆ ಗ್ರಾಮದ ಮಂಜೊಟ್ಟಿ ನಿವಾಸಿ ಶರತ್ ಬಿನ್ ದಿವಂಗತ ಚಂದಪ್ಪ ಗೌಡ ಅವರ ವಾಸ್ತವ್ಯದ ಮನೆಯ ತಡೆಗೋಡೆ ಕುಸಿದು ಬಿದ್ದಿರುತ್ತದೆ . ವಾಹನ ನಿಲ್ಲಿಸಲು ಮಾಡಿದ ಶೀಟಿನ ಶೆಡ್ ಕೂಡಾ ಕುಸಿದು ಬಿದ್ದಿರುತ್ತವೆ. 4 ತೆಂಗಿನ ಸಸಿ ಹಾಗೂ 8 ಅಡಿಕೆ ಸಸಿಗೆ ಹಾನಿಯಾಗಿರುತ್ತದೆ ಎಂದು ತಾಲೂಕು ಕಚೇರಿ ಮಳೆಹಾನಿ ವಿಭಾಗದ ಪ್ರಕಟಣೆ ತಿಳಿಸಿದೆ.
0 comments:
Post a Comment