ಡ್ರಗ್ಸ್ ವ್ಯಸನಿಗಳಿಗೆ ಸಮಾಜದ ಮುಖಂಡರು ಬೆಂಬಲಿಸುವುದನ್ನು ನಿಲ್ಲಿಸಿ, ಪೊಲೀಸರಿಗೆ ಒತ್ತಡ ಹಾಕದಿರಿ, ಸಮಾಜ ಕಂಟಕರನ್ನು ಮಟ್ಟ ಹಾಕುವ ಜವಾಬ್ದಾರಿ ನಮ್ಮದು : ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ - Karavali Times ಡ್ರಗ್ಸ್ ವ್ಯಸನಿಗಳಿಗೆ ಸಮಾಜದ ಮುಖಂಡರು ಬೆಂಬಲಿಸುವುದನ್ನು ನಿಲ್ಲಿಸಿ, ಪೊಲೀಸರಿಗೆ ಒತ್ತಡ ಹಾಕದಿರಿ, ಸಮಾಜ ಕಂಟಕರನ್ನು ಮಟ್ಟ ಹಾಕುವ ಜವಾಬ್ದಾರಿ ನಮ್ಮದು : ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ - Karavali Times

728x90

2 August 2023

ಡ್ರಗ್ಸ್ ವ್ಯಸನಿಗಳಿಗೆ ಸಮಾಜದ ಮುಖಂಡರು ಬೆಂಬಲಿಸುವುದನ್ನು ನಿಲ್ಲಿಸಿ, ಪೊಲೀಸರಿಗೆ ಒತ್ತಡ ಹಾಕದಿರಿ, ಸಮಾಜ ಕಂಟಕರನ್ನು ಮಟ್ಟ ಹಾಕುವ ಜವಾಬ್ದಾರಿ ನಮ್ಮದು : ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ

ಬಂಟ್ವಾಳ, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ಸಮಾಜವನ್ನು ಡ್ರಗ್ಸ್, ಅಮಲು ವ್ಯಸನ ಮುಕ್ತಗೊಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದ್ದು, ವ್ಯಸನಿಗಳಿಗೆ ಬೆಂಬಲ ನೀಡುವುದು, ಪೊಲೀಸ್ ಇಲಾಖೆಗೆ ಪ್ರಭಾವ, ಒತ್ತಡ ಹೇರುವುದು, ಕಾನೂನು ಬೆಂಬಲ ನೀಡುವುದನ್ನು ಸಮಾಜದ ಮುಖಂಡರು ಮೊದಲು ನಿಲ್ಲಿಸಬೇಕು ಎಂದು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ಅವರು ವ್ಯಸನಿಗಳಿಗೆ ಬೆಂಗಾವಲಾಗಿ ನಿಲ್ಲುವವರಿಗೆ ಛಾಟಿ ಬೀಸಿದರು. ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ವ್ಯಸನಮುಕ್ತ ಸಮಾಜ ನಿರ್ಮಾಣದ ಬಗ್ಗೆ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಜಾ, ಅಫೀಮು, ಡ್ರಗ್ಸ್ ಮೊದಲಾದ ಅಮಲು ಪದಾರ್ಥ ವ್ಯಸನಿಗಳು ಎಲ್ಲಾ ಸಮಾಜಕ್ಕೂ ಮಾರಕ ಹಾಗೂ ಕಂಟಕವಾಗಿದ್ದು, ಇದನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆ ಅಥವಾ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಪೋಷಕರ, ಸಮಾಜದ ಹಾಗೂ ಸಮುದಾಯದ ಪ್ರಮುಖರ ಸಹಕಾರ ಇದ್ದರೆ ಖಂಡಿತಾ ಈ ಕೇಡನ್ನು ಪೂರ್ಣವಾಗಿ ಸಮಾಜದಿಂದ ನಿರ್ಮೂಲನ ಮಾಡಲು ಸಾಧ್ಯ ಎಂದರು. 

ಡ್ರಗ್ಸ್ ವ್ಯಸನಿಗಳ ಬಗ್ಗೆ ಖಚಿತ ಮಾಹಿತಿಯನ್ನು ತಿಳಿದವರು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊAಡಾದ ಅಂತಹ ಮಂದಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಸಮಾಜ ವಿರೋಧಿ ಪಿಡುಗಿನ ವಿರುದ್ದ ಪೊಲೀಸರಿಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಯಾವುದೇ ಭಯ ಬೇಡ. ಮಾಹಿತಿ ನೀಡಿದವರ ವಿವರಗಳು ಎಲ್ಲಿಯೂ ಬಹಿರಂಗವಾಗುವುದಿಲ್ಲ. ಅದನ್ನು ಗೌಪ್ಯವಾಗಿಡಲಾಗುವುದು ಎಂದ ಪೊಲೀಸ್ ಅಧಿಕಾರಿ ವಿವೇಕಾನಂದ ಅವರು ಇಂತಹ ಸಮಾಜ ವಿರೋಧಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಲು ಕ್ರಮ ಕೈಗೊಂಡಾಗ ಈ ಬಗ್ಗೆ ಯಾರೂ ಕೂಡಾ ಪೊಲೀಸರಿಗೆ ಒತ್ತಡ, ಪ್ರಭಾವ ಹೇರಬೇಡಿ, ಅಂತಹವರ ಬಗ್ಗೆ ಶಿಫಾರಸ್ಸು ಮಾಡಿ ಠಾಣೆಗೆ ದೌಡಾಯಿಸಬೇಡಿ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿ. ಹಾಗಾದಾಗ ಪೊಲೀಸರು ತಮ್ಮ ಕಾರ್ಯಗಳನ್ನು ಸಲೀಸಾಗಿ ನಿರ್ವಹಿಸಿ ಸುಸಂಸ್ಕೃತ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಪೊಲೀಸರು ನಿರ್ವಹಿಸುತ್ತಾರೆ ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ಡ್ರಗ್ಸ್ ವ್ಯಸನಿಗಳಿಗೆ ಸಮಾಜದ ಮುಖಂಡರು ಬೆಂಬಲಿಸುವುದನ್ನು ನಿಲ್ಲಿಸಿ, ಪೊಲೀಸರಿಗೆ ಒತ್ತಡ ಹಾಕದಿರಿ, ಸಮಾಜ ಕಂಟಕರನ್ನು ಮಟ್ಟ ಹಾಕುವ ಜವಾಬ್ದಾರಿ ನಮ್ಮದು : ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ Rating: 5 Reviewed By: karavali Times
Scroll to Top