ಸಜಿಪಮುನ್ನೂರು : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿದ ಕಳ್ಳರು - Karavali Times ಸಜಿಪಮುನ್ನೂರು : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿದ ಕಳ್ಳರು - Karavali Times

728x90

2 September 2023

ಸಜಿಪಮುನ್ನೂರು : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿದ ಕಳ್ಳರು

ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ನಿವಾಸಿ ಮೈಕಲ್ ಡಿ ಸೋಜಾ (48) ಅವರ ಬಾಡಿಗೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳವುಗೈದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. 

ಸೆ 1 ರಂದು ಶುಕ್ರವಾರ ಬೆಳಿಗ್ಗೆ ಮೈಕಲ್ ಡಿಸೋಜ ಅವರು ತನ್ನ ಮನೆಗೆ ಲಾಕ್ ಹಾಕಿ ಮಕ್ಕಳೊಂದಿಗೆ ಮನೆಯಿಂದ ಹೊರ ಹೋಗಿದ್ದು, ಮದ್ಯಾಹ್ನ 2:45ಕ್ಕೆ ಮಗಳು ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಮನೆಯೊಳಗಿನ ಕಪಾಟಿನಲ್ಲಿಟ್ಟಿದ್ದ ಬಟ್ಟೆಬರೆಗಳು ಚಿಲ್ಲಾಪಿಲ್ಲಿ ಆಗಿರುವುದು ಕಂಡು ಬಂದಿರುತ್ತದೆ. 

ಬಳಿಕ ಪರಿಶೀಲಿಸಿದಾಗ ಯಾರೋ ಕಳ್ಳರು  ಮನೆಯ ಎದುರಿನ ಬಾಗಿಲು ಮುರಿದು ಒಳನುಗ್ಗಿ ಮನೆಯೊಳಗಿನ ಕೋಣೆಯಲ್ಲಿಟ್ಟ 2 ಕಪಾಟುಗಳ ಬಾಗಿಲು ಮುರಿದು 5.36 ಲಕ್ಷ ರೂಪಾಯಿ ಮೌಲ್ಯದ ಒಟ್ಟು 115 ಗ್ರಾಂ ತೂಕದ  ಚಿನ್ನಾಭರಣಗಳನ್ನು ಹಾಗೂ ಸುಮಾರು 3 ಸಾವಿರ ರೂಪಾಯಿ ರೂಪಾಯಿ ಮೌಲ್ಯದ  ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2023 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಹುಡುಕಾಟ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮುನ್ನೂರು : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿದ ಕಳ್ಳರು Rating: 5 Reviewed By: karavali Times
Scroll to Top