ದೇಶದ ಸಂವಿಧಾನ ನಾಶ ಮಾಡಿ ಮನುವಾದಿ ವ್ಯವಸ್ಥೆ ಜಾರಿಗೆ ಹುನ್ನಾರ ನಡೆಸುತ್ತಿರುವ ಫ್ಯಾಶಿಸ್ಟರರಿಂದ ದೇಶ ರಕ್ಷಿಸಬೇಕಾಗಿದೆ : ಕಾಮ್ರೆಡ್ ಶಂಕರ್ ಕರೆ - Karavali Times ದೇಶದ ಸಂವಿಧಾನ ನಾಶ ಮಾಡಿ ಮನುವಾದಿ ವ್ಯವಸ್ಥೆ ಜಾರಿಗೆ ಹುನ್ನಾರ ನಡೆಸುತ್ತಿರುವ ಫ್ಯಾಶಿಸ್ಟರರಿಂದ ದೇಶ ರಕ್ಷಿಸಬೇಕಾಗಿದೆ : ಕಾಮ್ರೆಡ್ ಶಂಕರ್ ಕರೆ - Karavali Times

728x90

9 October 2023

ದೇಶದ ಸಂವಿಧಾನ ನಾಶ ಮಾಡಿ ಮನುವಾದಿ ವ್ಯವಸ್ಥೆ ಜಾರಿಗೆ ಹುನ್ನಾರ ನಡೆಸುತ್ತಿರುವ ಫ್ಯಾಶಿಸ್ಟರರಿಂದ ದೇಶ ರಕ್ಷಿಸಬೇಕಾಗಿದೆ : ಕಾಮ್ರೆಡ್ ಶಂಕರ್ ಕರೆ

ಬಿ.ಸಿ.ರೋಡಿನಲ್ಲಿ ಸಿಪಿಐಎಂ (ಎಲ್) ಬಂಟ್ವಾಳ ತಾಲೂಕು ಸಮ್ಮೇಳನ 


ಬಂಟ್ವಾಳ, ಅಕ್ಟೋಬರ್ 09, 2023 (ಕರಾವಳಿ ಟೈಮ್ಸ್) : ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ, ಲೆನಿನ್ ವಾದಿ) ಲಿಬರೇಷನ್ ಬಂಟ್ವಾಳ ತಾಲೂಕು ಸಮ್ಮೇಳನವು ಬಿ ಸಿ ರೋಡಿನಲ್ಲಿ ನಡೆಯಿತು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕಾಮ್ರೇಡ್ ಶಂಕರ್ ಅವರು ಮಾತನಾಡಿ, ಇಂದು ದೇಶದ ಆಡಳಿತವು ಪ್ಯಾಶಿಸ್ಟರ ಕೈಯಲ್ಲಿದ್ದು ಈ ದೇಶದ ಸಂವಿಧಾನವನ್ನು ನಾಶ ಮಾಡಿ ಮನುವಾದಿ ವ್ಯವಸ್ಥೆಯನ್ನು ಜಾರಿಗೆ ತರಲು ಹುನ್ನಾರಗಳು ನಡೆಯುತ್ತಿದೆ. ಅದರ ಭಾಗವಾಗಿ ಸರಕಾರದ ವಿರುದ್ಧ ದ್ವನಿ ಎತ್ತುವವರನ್ನು ಕೊಲೆ ಮಾಡಲಾಗುತ್ತಿದೆ ಹಾಗೂ ಯುಎಪಿಎ ಮುಖಾಂತರ ಜೈಲಿಗಟ್ಟಲಾಗುತ್ತಿದೆ ಎಂದು ಆರೋಪಿಸಿದರು. 

ಈ ದೇಶದ ಸಂಸದೀಯ ವ್ಯವಸ್ಥೆಯನ್ನೇ ನಾಶ ಮಾಡುವ ಮೂಲಕ ಒಂದು ದೇಶ ಒಂದು ಚುನಾವಣೆ ಎಂಬುದನ್ನು ಜಾರಿಮಾಡಲು ಹುನ್ನಾರಗಳು ನಡೆಯುತ್ತಿದ್ದು, ಈ ದೇಶಕ್ಕೆ ಅಪಾಯಕಾರಿ ಆಗಿರುವ ಪ್ಯಾಶಿಸಂ ಅನ್ನು ತೊಲಗಿಸಲು ಮುಂಬರುವ ಚುನಾವಣೆಯಲ್ಲಿ ಎಲ್ಲಾ ಜಾತ್ಯಾತೀತ, ಎಡ ಶಕ್ತಿಗಳು ಒಗ್ಗಾಟ್ಟಾಗಿ ಪ್ರಯತ್ನ ನಡೆಸುತ್ತಿದ್ದು ಇದರಲ್ಲಿ ಸಿಪಿಐಎಂಎಲ್ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಈ ದೇಶದ ಸಂವಿಧಾನವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕೆಂದು ಜನತೆಗೆ ಕರೆ ನೀಡಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಮೋಹನ್ ಕೆ ಇ ಸಮ್ಮೇಳನ ಉದ್ಘಾಟಿಸಿದರು. ಕಾಮ್ರೇಡ್ ರಾಮಣ್ಣ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ಕಾಮ್ರೇಡ್ ಭರತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್, ಸರಸ್ವತಿ ಮಾಣಿ, ಅಶ್ರಪ್ ಕೊಯಿಲ ಭಾಗವಹಿಸಿದ್ದರು. ನ್ಯಾಯವಾದಿ ತುಳಸೀದಾಸ್ ವಿಟ್ಲ ಸ್ವಾಗತಿಸಿ, ಸಮ್ಮೇಳನದ ವರದಿ ಮಂಡಿಸಿದರು.

ಇದೇ ವೇಳೆ ನೂತನ ತಾಲೂಕು ಸಮಿತಿ ರಚಿಸಲಾಯಿತು. ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ, ಸದಸ್ಯರುಗಳಾಗಿ ಶಿವರಾಯ ಪ್ರಭು, ಸರಸ್ವತಿ ಮಾಣಿ, ದಿನೇಶ ಆಚಾರಿ ಮಾಣಿ, ದೇವಪ್ಪ ಗೌಡ ಕನ್ಯಾನ, ಸಜೇಶ್ ವಿಟ್ಲ, ಬಾಲಕೃಷ್ಣ ಚೇಳೂರು, ರಾಜಾ ಚೆಂಡ್ತಿಮಾರ್, ಹಮೀದ್ ಕುಕ್ಕಾಜೆ, ಲಿಯಾಕತ್ ಖಾನ್, ಆನಂದ ಶೆಟ್ಟಿಗಾರ್ ಅವರನ್ನು ಆರಿಸಲಾಯಿತು. 

  • Blogger Comments
  • Facebook Comments

0 comments:

Post a Comment

Item Reviewed: ದೇಶದ ಸಂವಿಧಾನ ನಾಶ ಮಾಡಿ ಮನುವಾದಿ ವ್ಯವಸ್ಥೆ ಜಾರಿಗೆ ಹುನ್ನಾರ ನಡೆಸುತ್ತಿರುವ ಫ್ಯಾಶಿಸ್ಟರರಿಂದ ದೇಶ ರಕ್ಷಿಸಬೇಕಾಗಿದೆ : ಕಾಮ್ರೆಡ್ ಶಂಕರ್ ಕರೆ Rating: 5 Reviewed By: karavali Times
Scroll to Top