ಬಂಟ್ವಾಳ, ಅಕ್ಟೋಬರ್ 07, 2023 (ಕರಾವಳಿ ಟೈಮ್ಸ್) : ಬ್ಯಾಂಕಿನಿಂದ ನಗದೀಕರಿಸಿ ಸ್ಕೂಟರಿನ ಸೀಟಿನಡಿ ಇಟ್ಟ ಹಣದ ಪೈಕಿ 1 ಲಕ್ಷ ರೂಪಾಯಿ ಹಣವನ್ನು ಕಳ್ಳರು ಎಗರಿಸಿದ ಘಟನೆ ಶುಕ್ರವಾರ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ ಸಿ ರೋಡು ಜಂಕ್ಷನ್ನಿನಲ್ಲಿ ನಡೆದಿದೆ.
ನರಿಕೊಂಬು ಗ್ರಾಮದ ನಿವಾಸಿ ಪ್ರಕಾಶ ಕೋಡಿಮಜಲು (52) ಅವರು ಶುಕ್ರವಾರ ಬೆಳಿಗ್ಗೆ ಬಿ ಸಿ ರೋಡಿನ ಬ್ಯಾಂಕ್ ಒಂದರಲ್ಲಿ 1.40 ಲಕ್ಷ ರೂಪಾಯಿ ಹಣವನ್ನು ನಗದೀಕರಿಸಿ, ತನ್ನ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು, ಬಳಿಕ ಬಿ ಸಿ ರೋಡು ಮಿನಿ ವಿಧಾನಸೌಧದ ಬಳಿ ಇಟ್ಟಿದ್ದ ತನ್ನ ದ್ವಿಚಕ್ರ ವಾಹನದ ಸೀಟಿನಡಿ ಇಟ್ಟು ಲಾಕ್ ಮಾಡಿ ತೆರಳಿದ್ದರು. ಬಳಿಕ ಮಧ್ಯಾಹ್ನದ ವೇಳೆಗೆ ವಾಪಾಸು ಬಂದು ದ್ವಿಚಕ್ರ ವಾಹನದಲ್ಲಿಟ್ಟಿದ್ದ ಹಣ ತೆಗೆಯಲು ಸೀಟ್ ಲಾಕ್ ತೆರೆದಾಗ ಅದರಲ್ಲಿ ಇಡಲಾಗಿದ್ದ ಹಣದ ಪೈಕಿ 1 ಲಕ್ಷ ರೂಪಾಯಿ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment