ಬಂಟ್ವಾಳ, ಅಕ್ಟೋಬರ್ 16, 2023 (ಕರಾವಳಿ ಟೈಮ್ಸ್) : ಅಕ್ರಮ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಕೃತ್ಯದಲ್ಲಿ ತೊಡಗಿದ್ದ ಬರೋಬ್ಬರಿ 37 ಮಂದಿ ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಿದ ನಗದು, ವಾಹನ ಸಹಿತ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ, ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದಲ್ಲಿರುವ ಎಂ ಆರ್ ರಿಕ್ರಿಯೇಷನ್ ಕ್ಲಬ್ ಹಿಂಬಾಗದಲ್ಲಿ, ತಗಡು ಶೀಟ್ ಛಾವಣಿಯ ಶೆಡ್ ಒಳಗೆ ಅಕ್ರಮವಾಗಿ ಹಣ ಪಣಕ್ಕಿಟ್ಟು ನಡೆಸುತ್ತಿದ್ದ ಉಲಾಯಿ-ಪಿದಾಯಿ ಜೂಜಾಟ ಕೇಂದ್ರದಲ್ಲಿ ಈ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಓರ್ವ ಪರಾರಿಯಾಗಿದ್ದು, ಉಳಿದ 37 ಮಂದಿ ಆರೋಪಿಗಳನ್ನು ಮತ್ತು ಸ್ಥಳದಲ್ಲಿದ್ದ ಆಟಕ್ಕೆ ಉಪಯೋಗಿಸಿದ ಇಸ್ಪಿಟ್ ಎಲೆಗಳು, 54,510/- ರೂಪಾಯಿ ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ ಪಿಠೋಪಕರಣಗಳು, 4 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಸೋಮವಾರ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2023 ಕಲಂ 79, 80 ಕರ್ನಾಟಕ ಪೆÇಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment