ಕಡಬ, ನವೆಂಬರ್ 26, 2023 (ಕರಾವಳಿ ಟೈಮ್ಸ್) : ತಾಲೂಕಿನ ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್ಸ್ ಎಂಬಲ್ಲಿನ ನಿವಾಸಿ ಎ ಆರ್ ಚಂದ್ರ (58) ಅವರ ಮನೆಯಂಗಳಕ್ಕೆ ಸ್ಕೂಟರ್ ಹಾಗೂ ಕಾರಿನಲ್ಲಿ ಬಂದ ಇಬ್ಬರು ಅಡಿಕೆ ಕಳ್ಳರು ಅಡಿಕೆ ಕಳವು ನಡೆಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದು ಮನೆ ಮಂದಿಗೆ ತಲವಾರು ಬೀಸಿ ಓರ್ವ ಅಡಿಕೆ ತುಂಬಿಸಿದ್ದ ಕಾರು ಸಹಿತ ಸಿಕ್ಕಿ ಬಿದ್ದು, ಇನ್ನೋರ್ವ ಅಡಿಕೆ ಸಹಿತ ಸ್ಕೂಟರಿನಲ್ಲಿ ಪರಾರಿಯಾದ ಘಟನೆ ಶನಿವಾರ (ನ 25) ನಡೆದಿದೆ.
ಸಿಕ್ಕಿಬಿದ್ದ ಆರೋಪಿ ತನ್ನ ಹೆಸರು ಬಶೀರ್ ಎಂದು ಹೇಳಿಕೊಂಡಿದ್ದು, ಪರಾರಿಯಾದವ ಹಕೀಂ ಎಂದು ತಿಳಿಸಿದ್ದಾನೆ.
ಮನೆ ಮಾಲಿಕ ಚಂದ್ರ ಅವರ ಪುತ್ರ ನಿಷ್ಕಲ್ ರಾಮ ಎಂಬವರು ಮೈಸೂರಿನಿಂದ ಮೋಟಾರ್ ಸೈಕಲಿನಲ್ಲಿ ಶನಿವಾರ ಮನೆಗೆ ಬಂದಾಗ, ತಮ್ಮ ಮನೆಯ ಅಂಗಳದಲ್ಲಿ ಒಂದು ಕಾರು ಮತ್ತು ಒಂದು ಸ್ಕೂಟರ್ ಗಳಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಬ್ಬರು ತಾವು ತಂದಿದ್ದ ವಾಹನಗಳಲ್ಲಿ ಅಡಿಕೆಯನ್ನು ಕದ್ದು ತುಂಬಿಸುತ್ತಿರುವುದನ್ನು ಕಂಡು ನಿಷ್ಕಲ್ ರಾಮ ರವರು ಈ ಬಗ್ಗೆ ಪ್ರಶ್ನಿಸಿದ್ದು, ಈ ವೇಳೆ ಅಪರಿಚಿತ ವ್ಯಕ್ತಿಗಳು ನಿಷ್ಕಲ್ ರಾಮ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿ, ಅವರುಗಳ ಪೈಕಿ ಓರ್ವ ಆರೋಪಿ ಅದಾಗಲೇ ಎರಡು ಗೋಣಿ ಚೀಲದಲ್ಲಿ ಸುಲಿದ ಸುಮಾರು 24 ಸಾವಿರ ರೂಪಾಯಿ ಮೌಲ್ಯದ ಅಡಿಕೆಯನ್ನು ತುಂಬಿಸಿಟ್ಟಿದ್ದ ಸ್ಕೂಟರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿರುತ್ತಾನೆ. ಇನ್ನೊಬ್ಬ ಆರೋಪಿಯು ಕಾರಿನಲ್ಲಿ ತುಂಬಿಸಿಟ್ಟಿದ್ದ ಸುಮಾರು 75 ಸಾವಿರ ರೂಪಾಯಿ ಮೌಲ್ಯದ 8 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಸುಲಿಯದ ಅಡಿಕೆಯೊಂದಿಗೆ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಈ ವೇಳೆ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಮನೆ ಮಾಲಿಕ ಹಾಗೂ ನೆರೆಕರೆಯ ಇತರರು ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ, ಆತನು ತನ್ನ ಹೆಸರು ಬಶೀರ್ ಎಂಬುದಾಗಿ ಹಾಗೂ ಪರಾರಿಯಾದ ವ್ಯಕ್ತಿಯ ಹೆಸರು ಹಕೀಂ ಎಂಬುದಾಗಿ ತಿಳಿಸಿರುತ್ತಾನೆ.
ಬಳಿಕ ಕೈಗೆ ಸಿಕ್ಕಿದ ಆರೋಪಿ ಬಶೀರ್ ಎಂಬಾತನನ್ನು ಮನೆಮಂದಿ ಬೆಳ್ಳಾರೆ ಪೊಲೀಸ್ ಠಾಣೆಗೆ ಒಪ್ಪಿಸಿ ಈ ಬಗ್ಗೆ ದೂರು ದಾಖಲಿಸಿದಂತೆ ಅಪರಾಧ ಕ್ರಮಾಂಕ 78/2023 ಕಲಂ 392 397 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
















0 comments:
Post a Comment