ಬಂಟ್ವಾಳ, ನವೆಂಬರ್ 07, 2023 (ಕರಾವಳಿ ಟೈಮ್ಸ್) : ಆನಿಯಾ ದರ್ಬಾರ್ ಹೋಟೆಲ್ ಸಮೂಹ ಸಂಸ್ಥೆಗಳ ಅಧೀನದಲ್ಲಿ ಬಿ ಸಿ ರೋಡಿನಲ್ಲಿ ಮತ್ತೊಂದು ಹೋಟೆಲ್ ಶುಭಾರಂಭಗೊಂಡಿದೆ. ಆಲಿಯಾ ಸಾಗರ್ ಹೆಸರಿನ ಶುದ್ದ ಸಸ್ಯಾಹಾರಿ ಮಲ್ಟಿ ಕಸಿನ್ ಫ್ಯಾಮಿಲಿ ರೆಸ್ಟೋರೆಂಟ್ ಇದಾಗಿದ್ದು, ಗಣ್ಯರ ಸಮ್ಮುಖದಲ್ಲಿ ಭಾನುವಾರ ಕಾರ್ಯಾರಂಭಗೊಂಡಿದೆ.
ಧಾರ್ಮಿಕ ವಿದ್ವಾಂಸರಾದ ಶೈಖುನಾ ಅಬ್ದುಲ್ ಖಾದಿರ್ ಅಲ್-ಖಾಸಿಮಿ ಬಂಬ್ರಾಣ, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಎಂ ವೈ ಅಶ್ರಫ್ ಫೈಝಿ ಮಿತ್ತಬೈಲು, ಎಂ ಕೆ ಅಝೀಝ್ ಅಮ್ಜದಿ ಮಾವಿನಕಟ್ಟೆ, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ತಾಲೂಕು ಹೋಟೆಲ್ ಎಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಕೆಪಿಸಿಸಿ ಮುಖಂಡ ಎಂ ಅಶ್ವನಿ ಕುಮಾರ್ ರೈ, ಪೊಲೀಸ್ ಅಧಿಕಾರಿ ಸುತೇಶ್, ಪತ್ರಕರ್ತ ಲತೀಫ್ ನೇರಳಕಟ್ಟೆ, ಪ್ರಮುಖರಾದ ತುಂಗಪ್ಪ ಬಂಗೇರ, ಮುಹಮ್ಮದ್ ಕಳವೂರು, ರಶೀದ್ ವಿಟ್ಲ, ರೊ ಸುರೇಶ್ ಸಾಲ್ಯಾನ್, ಡಾ ಮುಸ್ತಫಾ ಬಸ್ತಿಕೋಡಿ, ಶೇಖ್ ರಹ್ಮತುಲ್ಲಾ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.
ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಎಲ್ಲಾ ರೀತಿಯ ಶುದ್ದ ಸಸ್ಯಾಹಾರಿ ಉಪಾಹಾರಗಳು ವಿಶೇಷ ಸ್ವಾದದೊಂದಿಗೆ ಆಲಿಯಾ ಸಾಗರ್ ಹೋಟೆಲಿನಲ್ಲಿ ಲಭ್ಯವಿದೆ ಎಂದು ಹೋಟೆಲ್ ಮಾಲಕ ಹಂಝ ಬಸ್ತಿಕೋಡಿ ತಿಳಿಸಿದ್ದಾರೆ.
0 comments:
Post a Comment