ಪುತ್ತೂರು, ನವೆಂಬರ್ 10, 2023 (ಕರಾವಳಿ ಟೈಮ್ಸ್) : ತಾಲೂಕಿನ ಮುಕ್ರಂಪಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತಿಲ ಪರಿವಾರ ಕಚೇರಿ ನಿರ್ವಾಹಕ ವಿಜೇತ್ ಕುಮಾರ್ ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜೇತ್ ಅವರು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಛೇರಿಯಲ್ಲಿ ಕಛೇರಿ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದು, ನವೆಂಬರ್ 10 ರಂದು ಶುಕ್ರವಾರ ಮದ್ಯಾಹ್ನ ಅನಿಲ್, ಮಹಾಬಲ ಕೆ ಪಿ ಶೆಟ್ಟಿ ಅವರುಗಳೊಂದಿಗೆ ಪುತ್ತಿಲ ಕಛೇರಿ ಬಳಿ ಇದ್ದಾಗ ಹೊರಗಿನಿಂದ ಬೊಬ್ಬೆ ಕೇಳಿ ಹೊರಗಡೆ ಬಂದಾಗ ಆರೋಪಿಗಳಾದ ದಿನೇಶ್ ಪಂಜಿಗ ಮತ್ತು ಆತನ ಸಂಗಡಿಗರು ತಲವಾರು ತೋರಿಸಿ ಮನೀಶ್ ಎಂಬಾತನನ್ನು ಕೊಲೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ, ಅವ್ಯಾಚವಾಗಿ ಬೈದಿರುತ್ತಾರೆ ಎಂದು ದೂರು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2023, ಕಲಂ 143, 144, 147, 148, 352, 504, 506 ಜೊತೆಗೆ 149 ಐ.ಪಿ.ಸಿ ಮತ್ತು 25 (1ಬಿ) (ಬಿ) ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment