ಕ್ರೀಡಾಕೂಟದಲ್ಲಿ ಬಹುಮಾನ ಬರದ ಕಾರಣಕ್ಕೆ ವಿಷ ಸೇವಿಸಿದ್ದ ಪುತ್ತೂರು ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು - Karavali Times ಕ್ರೀಡಾಕೂಟದಲ್ಲಿ ಬಹುಮಾನ ಬರದ ಕಾರಣಕ್ಕೆ ವಿಷ ಸೇವಿಸಿದ್ದ ಪುತ್ತೂರು ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು - Karavali Times

728x90

26 November 2023

ಕ್ರೀಡಾಕೂಟದಲ್ಲಿ ಬಹುಮಾನ ಬರದ ಕಾರಣಕ್ಕೆ ವಿಷ ಸೇವಿಸಿದ್ದ ಪುತ್ತೂರು ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು

 ಪುತ್ತೂರು, ನವೆಂಬರ್ 26, 2023 (ಕರಾವಳಿ ಟೈಮ್ಸ್) : ಬಿಹಾರದಲ್ಲಿ ರಾಷ್ಷ್ರಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಬರದ ಬೇಸರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪುತ್ತೂರು ಕಾಲೇಜು ವಿದ್ಯಾರ್ಥಿನಿ, ಪುತ್ತೂರು-ಕುರಿಯ ನಿವಾಸಿ ನಿಶಾ ಬಿ ಎಂ ಎಂಬಾಕೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾಳೆ.

ಈ ಬಗ್ಗೆ ಮೃತ ವಿದ್ಯಾರ್ಥಿನಿಯ ಸಹೋದರ ನಿಶಾಂತ್ ಬಿ ಎಂ (22) ಪುತ್ತೂರು ಪೊಲೀಸರಿಗೆ ದೂರು ನೀಡಿದ್ದು, ತನ್ನ ತಂಗಿ ನಿಶಾ ಬಿ ಎಂ ಎಂಬಾಕೆ ಪುತ್ತೂರಿನ‌ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚೆಗೆ ಬಿಹಾರದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬಾಗವಹಿಸಿ ಅಲ್ಲಿ ಯಾವುದೇ ಬಹುಮಾನ ದೊರೆಯದೇ ಇದ್ದು, ಅದೇ ಬೇಸರದಲ್ಲಿ  ನ 14 ರಂದು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಳು. ತಕ್ಷಣ ಆಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಆದರೆ ಚಿಕಿತ್ಸೆಗೆ ಸ್ಪಂದಿಸದ ಆಕೆ ಶನಿವಾರ (ನ 25) ಮೃತ ಪಟ್ಟಿದ್ದಾಳೆ ಎಂದು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ  ಠಾಣೆಯಲ್ಲಿ UDR No 43/2023  ಕಲo 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕ್ರೀಡಾಕೂಟದಲ್ಲಿ ಬಹುಮಾನ ಬರದ ಕಾರಣಕ್ಕೆ ವಿಷ ಸೇವಿಸಿದ್ದ ಪುತ್ತೂರು ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು Rating: 5 Reviewed By: lk
Scroll to Top