ಬಂಟ್ವಾಳ, ನವೆಂಬರ್ 29, 2023 (ಕರಾವಳಿ ಟೈಮ್ಸ್) : ಸಜಿಪ ಪೇಟೆಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿ ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಲಾರಿ ಚಾಲಕನನ್ನು ಕಾಸರಗೋಡು ಜಿಲ್ಲೆಯ ಕುಂಜತ್ತೂರು ನಿವಾಸಿ ಮುಹಮ್ಮದ್ ಶಾಫಿ (28) ಎಂದು ಹೆಸರಿಸಲಾಗಿದೆ. ಸಜಿಪ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಸಜಿಪದ ಹೊಳೆ ಬದಿಯಲ್ಲಿ ಮರಳು ಲೋಡ್ ಮಾಡಿ ಕಳಿಸಿರುವುದಾಗಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment