ಹೀಯಾಳಿಸಿ ಸೌಹಾರ್ದಕ್ಕೆ ಧಕ್ಕೆ ತರುವುದು ಖಂಡನಾರ್ಹ - Karavali Times ಹೀಯಾಳಿಸಿ ಸೌಹಾರ್ದಕ್ಕೆ ಧಕ್ಕೆ ತರುವುದು ಖಂಡನಾರ್ಹ - Karavali Times

728x90

27 December 2023

ಹೀಯಾಳಿಸಿ ಸೌಹಾರ್ದಕ್ಕೆ ಧಕ್ಕೆ ತರುವುದು ಖಂಡನಾರ್ಹ

ಮಂಗಳೂರು, ಡಿಸೆಂಬರ್ 27, 2023 (ಕರಾವಳಿ ಟೈಮ್ಸ್) : ಸೌಹಾರ್ದಯುತವಾಗಿ ಜನ ಬದುಕುತ್ತಿರುವಾಗ  ಸಮಾಜದಲ್ಲಿ ಜಾತಿ-ಧರ್ಮದ ಮಧ್ಯೆ ಕಂದಕ ಸೃಷ್ಟಿಸುವ ದ್ವೇಷದ ಭಾಷಣಗಳ ಮೂಲಕ ಜನರ ಸೌಹಾರ್ದಕ್ಕೆ ಧಕ್ಕೆ ತರುವ ಮೂಲಕ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಅಕ್ಷಮ್ಯ ಹಾಗೂ ಅತ್ಯಂತ ಖಂಡನಾರ್ಹ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹೇಳಿದ್ದಾರೆ. 

ಮುಸ್ಲಿಂ ಮಹಿಳೆಯರ ಬಗ್ಗೆ ಆರೆಸ್ಸೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅಕ್ಷೇಪಾರ್ಹ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿರುವ ಅವರು, ಸಮುದಾಯಕ್ಕೆ, ಸಮಾಜಕ್ಕೆ ಹಿತಕರವಾದ ಸಂದೇಶಗಳನ್ನು ನೀಡಿ ಆ ಮೂಲಕ ಸಮಾಜದಲ್ಲಿ ಸೌಹಾರ್ದತೆ ಸ್ಥಾಪಿಸಬೇಕೇ ಹೊರತು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತಾನು ಯಾವುದೇ ಸ್ಥಾನ-ಮಾನ ಪಡೆದುಕೊಳ್ಳುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಸಮಾಜದ ಪ್ರಜ್ಞಾವಂತ ಜನ ಇಂತಹ ಆಕ್ಷೇಪಾರ್ಹ, ಅವಹೇಳನಕಾರಿ ದ್ವೇಷ ಭಾಷಣ ಮಾಡುವವರ ಮಾತಿಗೆ ಬೆಲೆ ನೀಡದೆ ಶಾಂತಿಯುತವಾಗಿ ತಮ್ಮ ಪ್ರಜ್ಞಾಪೂರ್ವಕ ಪ್ರತಿಕ್ರಿಯೆಗಳ ಮೂಲಕ ಪ್ರತ್ಯುತ್ತರ ನೀಡಬೇಕೆ ಹೊರತು ಯವತ್ತೂ ತಾಳ್ಮೆ ಕಳೆದುಕೊಂಡು ಅಂತಹವರ ಉದ್ದೇಶ ಸಾಧನೆಗೆ ಅವಕಾಶ ಮಾಡಿಕೊಡಬಾರದು. ಅಲ್ಲದೆ ಸರಕಾರ, ಮುಖ್ಯಮಂತ್ರಿ ಹಾಗೂ ಗೃಹಸಚಿವರು ಇಂತಹ ಕೃತ್ಯಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ, ಕ್ರಮ ಕೈಗೊಳ್ಳಬೇಕು ಎಂದು ಅಬ್ಬಾಸ್ ಅಲಿ ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹೀಯಾಳಿಸಿ ಸೌಹಾರ್ದಕ್ಕೆ ಧಕ್ಕೆ ತರುವುದು ಖಂಡನಾರ್ಹ Rating: 5 Reviewed By: karavali Times
Scroll to Top