ಸುಳ್ಯ, ಡಿಸೆಂಬರ್ 21, 2023 (ಕರಾವಳಿ ಟೈಮ್ಸ್) : ಜಮೀನು ಸ್ವಾಧೀನಪಡಿಸುವ ಇರಾದೆಯಿಂದ ವ್ಯಕ್ತಿಯೋರ್ವ ಹೋಟೆಲ್ ಮಾಲಕಗೆ ಕಿರುಕುಳ ನೀಡಿದ್ದಲ್ಲದೆ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ನಿವಾಸಿ ಚೋಮಣ್ಣ ನಾಯ್ಕ (60) ಅವರು ಪೊಲೀಸರಿಗೆ ದೂರು ನೀಡಿದ್ದು, ಚೋಮ ನಾಯ್ಕ ಅವರು ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಜಮೀನು ಹೊಂದಿ, ಆ ಜಮೀನಿನಲ್ಲಿ ಸಣ್ಣ ಹೊಟೇಲು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಸದ್ರಿ ಜಮೀನಿನ ಪಕ್ಕದ ಜಮೀನಿನಲ್ಲಿ ಕಟ್ಟಡವನ್ನು ಹೊಂದಿರುವ ಆರೋಪಿ ತಿಮ್ಮಪ್ಪ ಗೌಡ ಎಂಬವರು ಚೋಮನಾಯ್ಕ ಅವರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಇರಾದೆಯಿಂದ ಈ ಹಿಂದಿನಿಂದಲೂ ಕಿರುಕುಳ ನೀಡುತ್ತಿರುವುದಾಗಿದೆ. ಡಿ 15 ರಂದು ಬೆಳಿಗ್ಗೆ ಆರೋಪಿ ತಿಮಪ್ಪ ಗೌಡ ಹೊಟೇಲ್ ಬಳಿ ಬಂದು, ಚೋಮ ನಾಯ್ಕ ಅವರ ಪತ್ನಿ ಬೇಬಿ ಎಂಬವರನ್ನುದ್ದೇಶಿಸಿ ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿ ಕತ್ತಿ ಹಿಡಿದು ಕಡಿದು ಕೊಲ್ಲುವುದಾಗಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಂತೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2023 ಕಲಂ 504, 506 ಐಪಿಸಿ ಮತ್ತು ಕಲಂ 3(1)(ಆರ್)(ಎಸ್), 3(2)ವಿಎ ಎಸ್/ಎಸ್ ಟಿ ಪಿಎ ಅಮೆಂಡ್‍ಮೆಂಟ್ ಆಕ್ಟ್ 2015 ರಂತೆ ಪ್ರಕರಣ ದಾಖಲಿಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment