ಬಂಟ್ವಾಳ, ಡಿಸೆಂಬರ್ 03, 2023 (ಕರಾವಳಿ ಟೈಮ್ಸ್) : ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಿಟಾಚಿ ಮೂಲಕ ಅಡಿಕೆ ಗುಂಡಿ ತೆಗೆದು ಹಾನಿಗೊಳಿಸಿದ ಘಟನೆ ವೀರಕಂಭ ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಭ ನಿವಾಸಿ ಉಮಾಕರ್ ಎಸ್ ಬಂಗೇರ (42) ಅವರಿಗೆ ವೀರಕಂಭ ಗ್ರಾಮದಲ್ಲಿ ಸ್ಥಿರಾಸ್ಥಿ ಇದ್ದು, ಸದ್ರಿ ಜಮೀನಿಗೆ ಆರೋಪಿಗಳಾದ ಹರಿಶಂಕರ್ ಭಟ್, ದಿನೇಶ್ ಹಾಗೂ ಪುರುಷೋತ್ತಮ ಅವರು ಶನಿವಾರ ರಾತ್ರಿ ಅಕ್ರಮ ಪ್ರವೇಶ ಮಾಡಿ ಚಿದಾನಂದ ಎಂಬವರಿಗೆ ಸೇರಿದ ಹಿಟಾಚಿನಲ್ಲಿ 50 ಅಡಿಕೆ ಗುಂಡಿಗಳನ್ನು ತೆಗೆದು ಅಪರಾಧವೆಸಗಿರುತ್ತಾರೆ ಎಂದು ಉಮಾಕರ್ ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment