ಪೊಲೀಸ್ ಠಾಣೆ ಕೂಗಳತೆಯ, ಸೀಸಿ ಟೀವಿ ಕಣ್ಗಾವಲಿನಲ್ಲಿರುವ ಬಿ.ಸಿ.ರೋಡು ಪಟ್ಟಣದಲ್ಲಿ ಮತ್ತೆ ಕಳ್ಳರ ಕೈಚಳಕ : ಸರಣಿ ಕಳ್ಳತನ - Karavali Times ಪೊಲೀಸ್ ಠಾಣೆ ಕೂಗಳತೆಯ, ಸೀಸಿ ಟೀವಿ ಕಣ್ಗಾವಲಿನಲ್ಲಿರುವ ಬಿ.ಸಿ.ರೋಡು ಪಟ್ಟಣದಲ್ಲಿ ಮತ್ತೆ ಕಳ್ಳರ ಕೈಚಳಕ : ಸರಣಿ ಕಳ್ಳತನ - Karavali Times

728x90

24 December 2023

ಪೊಲೀಸ್ ಠಾಣೆ ಕೂಗಳತೆಯ, ಸೀಸಿ ಟೀವಿ ಕಣ್ಗಾವಲಿನಲ್ಲಿರುವ ಬಿ.ಸಿ.ರೋಡು ಪಟ್ಟಣದಲ್ಲಿ ಮತ್ತೆ ಕಳ್ಳರ ಕೈಚಳಕ : ಸರಣಿ ಕಳ್ಳತನ

ಬಂಟ್ವಾಳ, ಡಿಸೆಂಬರ್ 25, 2023 (ಕರಾವಳಿ ಟೈಮ್ಸ್) : ಇತ್ತೀಚೆಗೆ ಬಿ ಸಿ ರೋಡು ಮುಖ್ಯ ಪಟ್ಟಣದ ಕಿಲೋ ಮೀಟರ್ ಅಂತರದ ಕೈಕಂಬ ಜಂಕ್ಷನ್ನಿನಲ್ಲಿ ಕಳ್ಳರು ಕೈಚಳಕ ತೋರಿ ಹಲವು ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನ ಪ್ರಕರಣ ವರದಿಯಾಗಿ ಕೆಲವೇ ದಿನಗಳ ಅಂತರದಲ್ಲಿ ಇದೀಗ ಮತ್ತೆ ಭಾನುವಾರ ಮಧ್ಯ ರಾತ್ರಿ ವೇಳೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದ, ಸೀಸಿ ಟೀವಿ ಕಣ್ಗಾವಲಿನಲ್ಲಿರುವ ಬಿ ಸಿ ರೋಡು ಮುಖ್ಯ ಪೇಟೆಯಲ್ಲೇ ಕಳ್ಳರು ಚಾಲಾಕಿತನ ತೋರಿದ್ದು ಹೋಟೆಲ್, ಮೆಡಿಕಲ್, ಅಂಗಡಿ ಸೇರಿದಂತೆ ಕೆಲವೆಡೆ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ. 

ಬಿ ಸಿ ರೋಡು ಮುಖ್ಯ ಪೇಟೆಯ ಹೆದ್ದಾರಿ ಬದಿಯಲ್ಲೇ ಇರುವ ಆನಿಯಾ ದರ್ಬಾರ್ ಹೋಟೆಲಿನ ಎರಡೆರಡು ಶಟರ್ ಗಳನ್ನು ಬೇಧಿಸಿರುವ ಕಳ್ಳರು ಕ್ಯಾಶ್ ಡ್ರಾವರಿನಲ್ಲಿದ್ದ ಸುಮಾರು 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾರೆ. ಮುಸುಕುಧಾರಿಯಾಗಿರುವ ಖದೀಮನೋರ್ವ ಹೋಟೆಲಿನ ಗೇಟಿನ ಬೀಗವನ್ನು ಪೀಟಿಸುವ ದೃಶ್ಯ ಮಾತ್ರ ಸೀಸಿ ಟಿವಿಯಲ್ಲಿ ಲಭ್ಯವಾಗಿದ್ದು, ಉಳಿದಂತೆ ಒಳಪ್ರವೇಶಿಸುವ ಹಂತದಲ್ಲಿ ಸೀಸಿ ಕ್ಯಾಮೆರಾಕ್ಕೂ ಕವಚ ಹಾಕಿ ನುಗ್ಗಲಾಗಿದೆ. 

ಹೋಟೆಲಿನ ಇನ್ನೊಂದು ಪಾಶ್ರ್ವದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಸಹಿತ ಕೆಲ ಉದ್ಯಮಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಕೈಚಳಕ ತೋರಿ ಪರಾರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಹೃದಯ ಪಟ್ಟಣವಾಗಿರುವ ಬಿ ಸಿ ರೋಡಿನ ಪೇಟೆಯಲ್ಲಿ ಅದೂ ಕೂಡಾ ಪೊಲೀಸ್ ಉಪವಿಭಾಗಾಧಿಕಾರಿಗಳ ಕಚೇರಿ, ನಗರ ಪೊಲೀಸ್ ಇನ್ಸ್ ಪೆಕ್ಟರ್‍ಗಳ ಕಚೇರಿ ಹಾಗೂ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಎಲ್ಲವೂ ಕೂಗಳತೆ ದೂರದಲ್ಲಿದ್ದು, ರಾತ್ರಿ ಪಾಳಿಯಲ್ಲಿ ಪೊಲೀಸ್ ಗಸ್ತು ವಾಹನಗಳೂ ತಿರುಗಾಡುತ್ತಿರುವ ಮಧ್ಯೆ ಕಳ್ಳರು ತಮ್ಮ ಚುರುಕುತನ ತೋರಿರುವುದು ಇದೀಗ ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. 

ಇತ್ತೀಚೆಗಷ್ಟೆ ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಅಂಗಡಿಯಲ್ಲಿ ಹಾಡಹಗಲೇ ಮಹಿಳೆಯ ಕತ್ತಿನಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದ ಖದೀಮರನ್ನು ಒಂದೆರಡು ದಿನಗಳ ಮುಂಚೆ ಹೆಡೆಮುರಿ ಕಟ್ಟಿರುವ ಇಲ್ಲಿನ ಪೊಲೀಸ್ ಅಧಿಕಾರಿಗಳು ಇದೀಗ ನಿನ್ನೆ ರಾತ್ರಿ ಪೇಟೆಯ ಹೃದಯ ಭಾಗದಲ್ಲಿ ನಡೆದಿರುವ ಸರಣಿ ಕಳ್ಳತನ ಬೇಧಿಸಿ ಕಳ್ಳರನ್ನುಹೆಡೆಮುರಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಅಂಗಡಿ, ಹೋಟೆಲ್, ಮೆಡಿಕಲ್ ಸಹಿತ ಪೇಟೆಯ ಸೀಸಿ ಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಕಳ್ಳರ ಹೆಡೆಮುರಿ ಕಟ್ಟುವ ಭರವಸೆಯನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸ್ ಠಾಣೆ ಕೂಗಳತೆಯ, ಸೀಸಿ ಟೀವಿ ಕಣ್ಗಾವಲಿನಲ್ಲಿರುವ ಬಿ.ಸಿ.ರೋಡು ಪಟ್ಟಣದಲ್ಲಿ ಮತ್ತೆ ಕಳ್ಳರ ಕೈಚಳಕ : ಸರಣಿ ಕಳ್ಳತನ Rating: 5 Reviewed By: karavali Times
Scroll to Top