ಧರ್ಮಸ್ಥಳ, ಡಿಸೆಂಬರ್ 20, 2023 (ಕರಾವಳಿ ಟೈಮ್ಸ್) : ಧರ್ಮಸ್ಥಳ ಕ್ಷೇತ್ರಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಬೆಂಗಳೂರು ನಿವಾಸಿ ಮಹಿಳೆಯ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಇದ್ದ ಬ್ಯಾಗ್ ಎಗರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಬೆಂಗಳೂರು, ಹಲಸೂರು ನಿವಾಸಿ ಪಲನಿ ಮುದಲಿಯಾರ್ ಎಂಬವರೇ ಕಳ್ಳರ ಕೈಚಳಕದಿಂದ ಮಾಂಗಲ್ಯ ಸರ ಕಳೆದುಕೊಂಡಾಕೆ. ಇವರು ಸೋಮವಾರ ಬೆಳಿಗ್ಗೆ ತನ್ನ ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದು, ಬಳಿಕ ಸಂಜೆ ವೇಳೆಗೆ ಸುಬ್ರಹ್ಮಣ್ಯಕ್ಕೆ ತೆರಳಲು ಧರ್ಮಸ್ಥಳ ಮಹಾದ್ವಾರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ನಿಂತುಕೊಂಡಿದ್ದಾಗ ಜನಸಂದಣಿಯಲ್ಲಿ ಅವರ ಕೈಯಲ್ಲಿದ್ದ ಮಾಂಗಲ್ಯ ಸರ ಇದ್ದ ಪರ್ಸನ್ನು ಯಾರೋ ಕಳ್ಳರು ಎಗರಿಸಿಕೊಂಡು ಹೋಗಿದ್ದಾರೆ. ಕಳವಾದ ಮಾಂಗಲ್ಯ ಸರದ ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment