ಹೊಸ ವರ್ಷ ಹಿನ್ನಲೆಯಲ್ಲಿ ನಾಡಿನ ಜನತೆಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ - Karavali Times ಹೊಸ ವರ್ಷ ಹಿನ್ನಲೆಯಲ್ಲಿ ನಾಡಿನ ಜನತೆಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ - Karavali Times

728x90

31 December 2023

ಹೊಸ ವರ್ಷ ಹಿನ್ನಲೆಯಲ್ಲಿ ನಾಡಿನ ಜನತೆಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜನವರಿ 01, 2024 (ಕರಾವಳಿ ಟೈಮ್ಸ್) : ಜಗತ್ತೇ ಹೊಸ ವರ್ಷವನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಸಂಭ್ರಮದಲ್ಲಿರುವ ಸಂದರ್ಭ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೊಸ ವರ್ಷ ಶುಭಾಶಯದ ಸಂದೇಶ ನೀಡಿರುವ ಸಿಎಂ ಸಿದ್ದರಾಮಯ್ಯ “ಬದಲಾವಣೆಯ ವರ್ಷದಿಂದ ಭರವಸೆಯ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ ನಾಡ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹಳೆಯ ವರ್ಷದಲ್ಲಿ ಮುನಿಸುಕೊಂಡಿದ್ದ ಪ್ರಕೃತಿ ಹೊಸ ವರ್ಷದಲ್ಲಿ ನಮಗೆಲ್ಲ ಒಲಿದು ಬರಲಿ, ಸಕಲ ಜೀವಾತ್ಮಗಳಿಗೆ ಲೇಸನ್ನು ಉಂಟು ಮಾಡಲಿ, 2024ರ ಇಡೀ ವರ್ಷ ತಮ್ಮ ಬದುಕು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ, ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಮನದುಂಬಿ ಹಾರೈಸುತ್ತೇನೆ. ನಾವೆಲ್ಲರೂ ಕೂಡಿ ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳೋಣ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಶುಭ ಹಾರೈಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹೊಸ ವರ್ಷ ಹಿನ್ನಲೆಯಲ್ಲಿ ನಾಡಿನ ಜನತೆಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top