ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ಭಗವಾದ್ವಜ ಹಾರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು : ಅವಕಾಶ ನೀಡಿದ ಕಾಲೇಜು ವಿರುದ್ಧ ಕ್ರಮಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಆಗ್ರಹ - Karavali Times ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ಭಗವಾದ್ವಜ ಹಾರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು : ಅವಕಾಶ ನೀಡಿದ ಕಾಲೇಜು ವಿರುದ್ಧ ಕ್ರಮಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಆಗ್ರಹ - Karavali Times

728x90

23 January 2024

ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ಭಗವಾದ್ವಜ ಹಾರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು : ಅವಕಾಶ ನೀಡಿದ ಕಾಲೇಜು ವಿರುದ್ಧ ಕ್ರಮಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಆಗ್ರಹ

 ಮಂಗಳೂರು, ಜನವರಿ 24, 2024 (ಕರಾವಳಿ ಟೈಮ್ಸ್) : ಜನವರಿ 22 ರಂದು ಅಯೋದ್ಯೆ ಶ್ರೀರಾಮ ಮಂದಿರ ಉದ್ಘಾಟನೆ  ಸಂದರ್ಭ ಮಂಗಳೂರು‌ ಹೊರ ವಲಯದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ರಾಷ್ಟ್ರ ಧ್ವಜ ಹಾರಿಸುವ ದ್ವಜ ಸ್ತಂಭದಲ್ಲಿ ಭಗವಾಧ್ವಜ ಹಾರಿಸಿ ವಿದ್ಯಾರ್ಥಿ ಗಳು  ಸಂಭ್ರಮಿಸಿರುವ ಘಟನೆ‌ ನಡೆದಿದ್ದು, ಇದರಿಂದಾಗಿ ಅಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿ ಗಳಲ್ಲಿ ಪರಸ್ಪರ ದ್ವೇಷದ ಭಾವನೆಗಳು ಉಂಟಾಗಿ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವ ಸಂಭವಗಳು‌ ಇದ್ದು , ಕಾಲೇಜಿನ‌ ಆಡಳಿತ‌ ಮಂಡಳಿಯು‌ ವಿದ್ಯಾರ್ಥಿ ಗಳ ಈ ಗೂಂಡಾ ವರ್ತನೆಗೆ ಯಾವುದೇ ಕ್ರಮ ವಹಿಸದೇ‌ ಮೌನ ವಹಿಸಿರುವುದರಿಂದ ಇಂತಹ ಘಟನೆಗಳು ಮರುಕಳಿಸುವ ಸಂಭವ ಇದೆ. ತಕ್ಷಣ ಈ ರೀತಿಯ ಘಟನೆಗೆ‌ ಕಾರಣರಾದ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆಯಲು ಅವಕಾಶ ನೀಡಿದ ಕಾಲೇಜಿನ ವಿರುದ್ದ ಸಂಬಂಧಪಟ್ಟ ಇಲಾಖೆ ಕ್ರಮ‌ಕೈಗೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಒತ್ತಾಯಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಯಾವುದೇ ಭಯವಿಲ್ಲದೇ ಕೋಮುವಾದಿ ಶಕ್ತಿ ಗಳು ಇಂತಹ ಘಟನೆಯಲ್ಲಿ ಭಾಗಿಯಾಗುತ್ತಿದ್ದು ರಾಜ್ಯ ಸರಕಾರವು ಕೂಡಲೇ ಗಮನಹರಿಸಿ ಶಾಲಾ ಕಾಲೇಜುಗಳಲ್ಲಿ ಇಂತಹ ಘಟನೆಗೆ ಅವಕಾಶ‌ ನೀಡುತ್ತಿರುವ ಶಾಲಾ ಕಾಲೇಜು ಗಳ ಮೇಲೆ ಕ್ರಮಕೈಗೊಂಡು ಶೈಕ್ಷಣಿಕ ರಂಗವನ್ನು ಕೋಮುವಾದಿಗಳಿಂದ ದೂರವಿಡಲು ಕ್ರಮ ವಹಿಸುವಂತೆ ಅಖಿಲ ಭಾರತ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ಭಗವಾದ್ವಜ ಹಾರಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು : ಅವಕಾಶ ನೀಡಿದ ಕಾಲೇಜು ವಿರುದ್ಧ ಕ್ರಮಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಆಗ್ರಹ Rating: 5 Reviewed By: lk
Scroll to Top