ಜಾಗದ ತಕಾರಿಗೆ ಸಂಬಂಧಿಸಿ ತಂಡದ ಮಧ್ಯೆ ಘರ್ಷಣೆ : ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು - Karavali Times ಜಾಗದ ತಕಾರಿಗೆ ಸಂಬಂಧಿಸಿ ತಂಡದ ಮಧ್ಯೆ ಘರ್ಷಣೆ : ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು - Karavali Times

728x90

5 January 2024

ಜಾಗದ ತಕಾರಿಗೆ ಸಂಬಂಧಿಸಿ ತಂಡದ ಮಧ್ಯೆ ಘರ್ಷಣೆ : ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

ಬಂಟ್ವಾಳ, ಜನವರಿ 05, 2024 (ಕರಾವಳಿ ಟೈಮ್ಸ್) : ಜಾಗದ ತಕರಾರಿಗೆ ಸಂಬಂಧಿಸಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. 

ಈ ಬಗ್ಗೆ ದೂರು ನೀಡಿರುವ ಬೆಳ್ತಂಗಡಿ ತಾಲೂಕು, ತಣ್ಣೀರುಪಂಥ ಗ್ರಾಮದ ನಾರ್ಯ ನಿವಾಸಿ ಧರ್ಣಪ್ಪ ನಾಯ್ಕ, ಅವರು ನಾನು ಪರಿಶಿಷ್ಟ ಪಂಗಡದಕ್ಕೆ ಸೇರಿದ್ದು, ನನ್ನ ಜಾಗಕ್ಕೆ ಹಾಕಿದ ಬೇಲಿಯ ವಿಚಾರದಲ್ಲಿ ಆರೋಪಿಗಳಾದ ಪವಿತ್ರ ಹಗೂ ಚೆನ್ನಪ್ಪ ಗೌಡ ಅವರೊಂದಿಗೆ ತಕರಾರಿದ್ದು, ಜನವರಿ 3 ರಂದು ರಾತ್ರಿ ಇದೇ ವಿಷಯದಲ್ಲಿ ಆರೋಪಿಗಳಾದ ಪವಿತ್ರ, ಚೆನ್ನಪ್ಪ ಗೌಡ ಹಾಗೂ ಇತರ ಎಂಟು ಮಂದಿ ಬಂದು ಕಲ್ಲು ಎಸೆದು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ನನಗೆ ಹಾಗೂ ನನ್ನ ಮಗ ಗಿರೀಶ್ ಎಂಬಾತನಿಗೂ ಗಾಯವಾಗಿದೆ ಎಂದು ದೂರು ನೀಡಿದ್ದಾರೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಣ್ಣೀರುಪಂಥ ಗ್ರಾಮದ ಅಳಕೆ ನಿವಾಸಿ ಪವಿತ್ರ ಅವರು ಪ್ರತಿ ದೂರು ನೀಡಿದ್ದು, ನಾವು ವಾಸವಾಗಿರುವ ಅಳಕೆಯ ಮನೆಯ ಬಳಿ ಆರೋಪಿಗಳಾದ ಗಿರೀಶ, ದಿನೇಶ್, ಶಶಿಕಲಾ ಹಾಗೂ ಅವರುಗಳು ಜನವರಿ 3 ರಂದು ರಾತ್ರಿ ಅಕ್ರಮ ಪ್ರವೇಶ ಮಾಡಿ, ಮನೆಯ ಕಿಟಕಿ ಗ್ಲಾಸ್, ಹಾಗೂ ಸಿಸಿ ಕ್ಯಾಮರವನ್ನು ಕಲ್ಲಿನಿಂದ ಒಡೆದು ದ್ವಂಸ ಮಾಡಿ, ನಮ್ಮನ್ನುದ್ದೇಶಿಸಿ, ಅವ್ಯಾಚವಾಗಿ ಬೈದು, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುತ್ತಾರೆ ಎಂದು ದೂರು ನೀಡಿದ್ದಾರೆ. 

ಈ ಎರಡೂ ದೂರುಗಳನ್ನು ಸ್ವೀಕರಿಸಿರುವ ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜಾಗದ ತಕಾರಿಗೆ ಸಂಬಂಧಿಸಿ ತಂಡದ ಮಧ್ಯೆ ಘರ್ಷಣೆ : ಪೂಂಜಾಲಕಟ್ಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು Rating: 5 Reviewed By: karavali Times
Scroll to Top