ಬಂಟ್ವಾಳ, ಜನವರಿ 01, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ 24ನೇ ವಾರ್ಡ್ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ಅನುದಾನದಿಂದ ಕಾಂಕ್ರಿಟೀಕರಣಗೊಂಡ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಮುಖ್ಯ ರಸ್ತೆ ಹಾಗೂ ಎಸ್ ಎಂ ನಗರ ಒಳ ರಸ್ತೆಯನ್ನು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರು ಸೋಮವಾರ ಉದ್ಘಾಟಿಸಿದರು.
ಇದೇ ವೇಳೆ ರಮಾನಾಥ ರೈ ಹಾಗೂ ಕೌನ್ಸಿಲರ್ ಸಿದ್ದೀಕ್ ಅವರನ್ನು ಸ್ಥಳೀಯರು ಅಭಿನಂದಿಸಿದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ನೂರುದ್ದೀನ್ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಗುತ್ತಿಗೆದಾರ ಪಿ ಎಸ್ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಪ್ರಮುಖರಾದ ದಾಮೋದರ ಮೆಲ್ಕಾರ್, ರಝಾಕ್ ಎಬಿಸಿ, ಅಬ್ದುಲ್ ಮಜೀದ್ ಎಸ್ ಎಂ ನಗರ, ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಮಜೀದ್ ಕಂಟ್ರಾಕ್ಟರ್, ಹನೀಫ್ ಮೆಲ್ಕಾರ್, ಝಕರಿಯಾ ತೋಟ, ಅಬ್ದುಲ್ ಖಾದರ್ ಬೋಗೋಡಿ, ಹಸನಬ್ಬ ಎಸ್ ಎಂ ನಗರ, ಅಬ್ಬಾಸ್, ಅಬ್ದುಲ್ ರಬ್ಬ್, ಯು ಅಹ್ಮದ್ ಬಾವಾ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment