ಪುತ್ತೂರು, ಜನವರಿ 18, 2024 (ಕರಾವಳಿ ಟೈಮ್ಸ್) : ತೋಟಕ್ಕೆ ನೀರು ಹಾಯಿಸಲು ನಿರ್ಮಿಸಲಾಗಿದ್ದ ಕಚ್ಚಾ ಮಣ್ಣಿನ ತೊಟ್ಟಿಗೆ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಪುತ್ತೂರು-ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ ಬುಧವಾರ ನಡೆದಿದೆ.
ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ಪ್ರಕಾಶ್ ಚಂದ್ರ ಅವರ ಪತ್ನಿ ಶುಭಲಕ್ಷ್ಮಿ (49) ಎಂದು ಹೆಸರಿಸಲಾಗಿದೆ. ಬುಧವಾರ ಬೆಳಿಗ್ಗೆ ಮನೆಯಲ್ಲಿದ್ದ ಶುಭಲಕ್ಷ್ಮಿ ಅವರು ಹಠಾತ್ ಕಾಣೆಯಾಗಿದ್ದರು. ಈ ಬಗ್ಗೆ ಸುತ್ತಮುತ್ತ ಹುಡುಕಿದಾಗ ತೋಟಕ್ಕೆ ನೀರು ಹಾಯಿಸಲು ನಿರ್ಮಿಸಿದ್ದ ಕೃತಕ ಕಚ್ಚಾ ಮಣ್ಣಿನ ತೊಟ್ಟಿಯ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶುಭಲಕ್ಷ್ಮಿ ಅವರು ತೋಟದ ಗುಡ್ಡೆಯ ನೀರಿನ ತೊಟ್ಟಿಯಲ್ಲಿ ನೀರು ಇರುವ ಬಗ್ಗೆ ನೋಡಲು ಆಗಾಗ ಹೋಗುತ್ತಿದ್ದು ಬುಧವಾರ ಬೆಳಿಗ್ಗೆಯೂ ಹಾಗೆ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ತೊಟ್ಟಿಯ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಮೃತರ ಪತಿ ಪ್ರಕಾಶ್ ಚಂದ್ರ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 08/2024 ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment