ಬಂಟ್ವಾಳ, ಜನವರಿ 25, 2024 (ಕರಾವಳಿ ಟೈಮ್ಸ್) : ಪತಿಯ ವಸತಿ ಗೃಹ ಖಾಲಿ ಮಾಡುವಂತೆ ಪತ್ನಿಯೇ ತಂಡ ಕಟ್ಟಿಕೊಂಡು ಬಂದು ಪತಿಗೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಂಗಳೂರು ಕದ್ರಿ ದೇವಸ್ಥಾನ ಬಳಿಯ ನಿವಾಸಿ ಕಿಶೋರ್ ಕುಮಾರ್ ಬೋಳಾರ್ (45) ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಿಶೋರ್ ಅವರ ಪತ್ನಿ ಶುಭಾ ಅವರಿಗೂ ಕೌಟುಂಬಿಕ ತಕರಾರಿದ್ದು, ಈ ಬಗ್ಗೆ ವಿವಾಹ ವಿಚ್ಚೇದನ ದಾವೆ ಪ್ರಸ್ತುತ ನ್ಯಾಯಾಲಯದಲ್ಲಿರುತ್ತದೆ. ಬಳಿಕ ಪತಿ ವಾಸವಾಗಿರುವ ಮೆಲ್ಕಾರ್ ಎಂಬಲ್ಲಿರುವ ಮನೆಯನ್ನು ತೆರವುಗೊಳಿಸಲು ದಾವೆ ಹೂಡಿದ್ದು, ಈ ಪ್ರಕರಣವೂ ವಿಚಾರಣೆಯಲ್ಲಿರುತ್ತದೆ.
ಜನವರಿ 23 ರಂದು ಸಂಜೆ ಕಿಶೋರ್ ಅವರು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿನ ಸಾರಾ ಆರ್ಕೆಡ್ ನಲ್ಲಿರುವ ತನ್ನ ವಸತಿ ಗೃಹಕ್ಕೆ ಬಂದಾಗ, ಆರೋಪಿತೆ ಪತ್ನಿ ಶುಭಾ ಅವರು ಇನ್ನೋರ್ವ ಆರೋಪಿ ಶಿವಪ್ರಸಾದ್ ಶೆಟ್ಟಿ ಹಾಗೂ ಇತರ ಇಬ್ಬರೊಂದಿಗೆ ಬಂದು ಆರೋಪಿ ಶಿವಪ್ರಸಾದ್ ಶೆಟ್ಟಿ ಅವರು ಸದ್ರಿ ಮನೆಯನ್ನು ಖಾಲಿ ಮಾಡುವ ವಿಚಾರದಲ್ಲಿ ತಕರಾರು ತೆಗೆದು ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುತ್ತಾನೆ ಹಾಗೂ ಕಿಶೋರ್ ಅವರ ಮೇಲೆ ಕಾರನ್ನು ಚಲಾಯಿಸಿ ಕೊಲ್ಲಲು ಯತ್ನಿಸಿರುತ್ತಾನೆ ಎಂದು ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment