ಬಂಟ್ವಾಳ, ಫೆಬ್ರವರಿ 09, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿರುವ ಕರ್ನಾಟಕ ಬ್ಯಾಂಕಿಗೆ ಕಳ್ಳರು ನುಗ್ಗಿ ನಗದು ಹಾಗೂ ಚಿನ್ನಾಭರಣ ದರೋಡೆಗೈದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್, ಕಡಬ ನಿವಾಸಿ ರಾಮಕೃಷ್ಣ ವಿ ಯು ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೆ 7 ರ ಸಂಜೆಯಿಂದ ಮರುದಿನ ಅಂದರೆ ಫೆ 8 ರ ಬೆಳಿಗ್ಗಿನ ಅವಧಿಯಲ್ಲಿ, ಬ್ಯಾಂಕಿನ ಕಟ್ಟಡದ ಕಿಟಕಿಯನ್ನು ಯಾರೋ ಕಳ್ಳರೂ ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ, ಬ್ಯಾಂಕಿನ ಒಳಗಡೆ ಸ್ಟ್ರಾಂಗ್ ರೂಮಿನ ಬಾಗಿಲನ್ನು ಯಾವುದೋ ಸಾಧನದಿಂದ ತುಂಡರಿಸಿ ಕಳ್ಳತನ ಮಾಡಿರುತ್ತಾರೆ.
ಬ್ಯಾಂಕಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳಲ್ಲಿ ಎಷ್ಟು ಪ್ರಮಾಣದ ಚಿನ್ನಾಭರಣಗಳು ಮತ್ತು ನಗದು ಹಣ ಕಳವಾಗಿರುತ್ತದೆ ಎಂಬುದನ್ನು ಪರಿಶೀಲನೆಯ ಬಳಿಕ ಮುಂದಕ್ಕೆ ತಿಳಿಸುವುದಾಗಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ ಬಿ ಸಹಿತ ಹಿರಿಯ ಪೊಲೀಸರ್ ಅಧಿಕಾರಿಗಳು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment