ಬಂಟ್ವಾಳ, ಫೆಬ್ರವರಿ 04, 2024 (ಕರಾವಳಿ ಟೈಮ್ಸ್) : ಸ್ಕೂಟರ್ ರಸ್ತೆ ಬದಿಯ ಕಂಪೌಂಡಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸರಪಾಡಿ ಗ್ರಾಮದ ಅಜಿಲಮೊಗರು ಎಂಬಲ್ಲಿ ನಡೆದಿದೆ.
ಗಾಯಾಳು ಸಹಸವಾರನನ್ನು ಮಂಗಳೂರು ತಾಲೂಕು, ಅಶೋಕನಗರ ನಿವಾಸಿ ಶ್ವಾನ್ ವೇಗಸ್ ಎಂದು ಹೆಸರಿಸಲಾಗಿದೆ. ಲೂಯಿಸ್ ಪಾಯಸ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಚಾಲಕನ ನಿಯಂತ್ರಣ ಮೀರಿ ಅಜಿಲಮೊಗರಿನಲ್ಲಿ ರಸ್ತೆ ಬದಿಯ ಕಂಪೌಂಡಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಶ್ವಾನ್ ವೇಗಸ್ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಕೂಟರ್ ಸವಾರ ಲೂಯಿಸ್ ಪಾಯಸ್ ಅವರ ದುಡುಕುತನದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಗಾಯಾಳು ಬಾಲಕನ ತಂದೆ ಜಾಯ್ ಜೀವನ್ ಪ್ರಕಾಶ್ ವೇಗಸ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment