ಕೇಸರಿ ನಗರದಲ್ಲಿ ಕೈ ರಣಕಹಳೆ : ಅಡ್ಯಾರ್ ಸಮಾವೇಶಕ್ಕೆ ಹರಿದು ಬಂದ ಗ್ಯಾರಂಟಿ ಫಲಾನುಭವಿಗಳು, ಕರಾವಳಿಯಲ್ಲಿ ಬಿಜೆಪಿ ಸದ್ದಡಗಿಸುವ ಪ್ರತಿಜ್ಞೆಗೈದ ನಾಯಕರ ಘೋಷಣೆಗೆ ಕಾರ್ಯಕರ್ತರ ಚಪ್ಪಾಳೆ - Karavali Times ಕೇಸರಿ ನಗರದಲ್ಲಿ ಕೈ ರಣಕಹಳೆ : ಅಡ್ಯಾರ್ ಸಮಾವೇಶಕ್ಕೆ ಹರಿದು ಬಂದ ಗ್ಯಾರಂಟಿ ಫಲಾನುಭವಿಗಳು, ಕರಾವಳಿಯಲ್ಲಿ ಬಿಜೆಪಿ ಸದ್ದಡಗಿಸುವ ಪ್ರತಿಜ್ಞೆಗೈದ ನಾಯಕರ ಘೋಷಣೆಗೆ ಕಾರ್ಯಕರ್ತರ ಚಪ್ಪಾಳೆ - Karavali Times

728x90

17 February 2024

ಕೇಸರಿ ನಗರದಲ್ಲಿ ಕೈ ರಣಕಹಳೆ : ಅಡ್ಯಾರ್ ಸಮಾವೇಶಕ್ಕೆ ಹರಿದು ಬಂದ ಗ್ಯಾರಂಟಿ ಫಲಾನುಭವಿಗಳು, ಕರಾವಳಿಯಲ್ಲಿ ಬಿಜೆಪಿ ಸದ್ದಡಗಿಸುವ ಪ್ರತಿಜ್ಞೆಗೈದ ನಾಯಕರ ಘೋಷಣೆಗೆ ಕಾರ್ಯಕರ್ತರ ಚಪ್ಪಾಳೆ

 ಮಂಗಳೂರು, ಫೆಬ್ರವರಿ 17, 2024 (ಕರಾವಳಿ ಟೈಮ್ಸ್) : ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರ್ನಾಟಕ ಕಾಂಗ್ರೆಸ್ ಲೋಕಸಭಾ ಚುನಾವಣಾ ರಣ ಕಹಳೆ ಮೊಳಗಿಸಿದೆ. ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುತುವರ್ಜಿಯಿಂದ ಕೆಪಿಸಿಸಿ ಗುರುವಾರ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿತ್ತು. 

ವಾರದ ಕೆಲಸದ ದಿನವಾಗಿರುವ ಶನಿವಾರ ಮಟ ಮಟ ಮಧ್ಯಾಹ್ನ ಈ ಸಮಾವೇಶ ಹಮ್ಮಿಕೊಂಡಿದ್ದರೂ ಸಹಸ್ರ ಸಂಖ್ಯೆಯಲ್ಲಿ ಜನರು ಧಾವಿಸಿ ಬಂದರು. ಸಾಧಾರಣವಾಗಿ ಕೈ ಸಮಾವೇಶ ಕಾರ್ಯಕರ್ತರ ಸಮಾವೇಶವಾಗಿ ಮಾತ್ರ ಯಶಸ್ಸು ಕಾಣುತ್ತಿತ್ತು. ಆದರೆ ಈ ಬಾರಿ ಮಾತ್ರ ಕಾರ್ಯಕರ್ತರಿಗಿಂತಲೂ ಗ್ಯಾರಂಟಿ ಫಲಾನುಭವಿಗಳು ಜಮಾಯಿಸಿದಂತೆ ಕಂಡು ಬಂತು. ಸಾರ್ವಜನಿಕರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಅತೀ ಹೆಚ್ಚಾಗಿ ಕಂಡು ಸಮಾವೇಶದಲ್ಲಿ ಕಂಡು ಬಂದಿರುವುದು ವಿಶೇಷವಾಗಿತ್ತು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರ ದಂಡೇ ಸಮಾವೇಶದಲ್ಲಿ ಜಮಾವಣೆಗೊಂಡಿತ್ತು. ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಸಹಿತ ಕೆಲವೇ ಮಂದಿಗೆ ಮಾತ್ರ ಭಾಷಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ಕೇಸರಿ ನಗರದಲ್ಲಿ ಕೈ ರಣಕಹಳೆ : ಅಡ್ಯಾರ್ ಸಮಾವೇಶಕ್ಕೆ ಹರಿದು ಬಂದ ಗ್ಯಾರಂಟಿ ಫಲಾನುಭವಿಗಳು, ಕರಾವಳಿಯಲ್ಲಿ ಬಿಜೆಪಿ ಸದ್ದಡಗಿಸುವ ಪ್ರತಿಜ್ಞೆಗೈದ ನಾಯಕರ ಘೋಷಣೆಗೆ ಕಾರ್ಯಕರ್ತರ ಚಪ್ಪಾಳೆ Rating: 5 Reviewed By: lk
Scroll to Top