ಆನ್ ಲೈನ್ ಮೋಸದ ಕೃತ್ಯ ನಡೆಸಲು ಸಂಚು : 42 ಮೊಬೈಲ್ ಸಿಮ್ ಹೊಂದಿದ್ದ ಐವರು ಧರ್ಮಸ್ಥಳ ಪೊಲೀಸರ ಬಲೆಗೆ - Karavali Times ಆನ್ ಲೈನ್ ಮೋಸದ ಕೃತ್ಯ ನಡೆಸಲು ಸಂಚು : 42 ಮೊಬೈಲ್ ಸಿಮ್ ಹೊಂದಿದ್ದ ಐವರು ಧರ್ಮಸ್ಥಳ ಪೊಲೀಸರ ಬಲೆಗೆ - Karavali Times

728x90

4 February 2024

ಆನ್ ಲೈನ್ ಮೋಸದ ಕೃತ್ಯ ನಡೆಸಲು ಸಂಚು : 42 ಮೊಬೈಲ್ ಸಿಮ್ ಹೊಂದಿದ್ದ ಐವರು ಧರ್ಮಸ್ಥಳ ಪೊಲೀಸರ ಬಲೆಗೆ

 ಧರ್ಮಸ್ಥಳ, ಫೆಬ್ರವರಿ 04, 2024 (ಕರಾವಳಿ ಟೈಮ್ಸ್) : ಆನ್ ಲೈನ್ ಮೂಲಕ ವ್ಯವಹಾರಕ್ಕಾಗಿ ಹಾಗೂ ಆನ್ ಲೈನ್ ಮೋಸದ ಕೃತ್ಯಗಳನ್ನು ಎಸಗುವ ಉದ್ದೇಶಕ್ಕಾಗಿ, ಅಪರಿಮಿತ ಅಂದರೆ ಸುಮಾರು 42 ಮೊಬೈಲ್ ಸಿಮ್ ಕಾರ್ಡುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದ ಐವರನ್ನು ಧರ್ಮಸ್ಥಳ ಠಾಣಾ ಪೊಲೀಸರು ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಬಳಿ ಫೆ 1 ರಂದು ವಶಕ್ಕೆ ಪಡೆದುಕೊಂಡಿದ್ದಾರೆ. 

ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2024 ಕಲಂ 420, 120 ಬಿ ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಯಾವ ಉದ್ದೇಶ ಹೊಂದಿದ್ದರು ಎಂಬುದರ ಬಗ್ಗೆ ತನಿಖೆಯ ಬಳಿಕ ತಿಳಿಸಲಾಗುವುದು ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಆನ್ ಲೈನ್ ಮೋಸದ ಕೃತ್ಯ ನಡೆಸಲು ಸಂಚು : 42 ಮೊಬೈಲ್ ಸಿಮ್ ಹೊಂದಿದ್ದ ಐವರು ಧರ್ಮಸ್ಥಳ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top