ಬಂಟ್ವಾಳ, ಫೆಬ್ರವರಿ 05, 2024 (ಕರಾವಳಿ ಟೈಮ್ಸ್) : ಅಕ್ರಮವಾಗಿ ಜಾನುವಾರು ವಧಾ ಮಾಡಿ ಮಾಂಸ ಸಾಗಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಎರಡೂವರೆ ಕ್ವಿಂಟಾಲಿಗೂ ಅಧಿಕ ಮಾಂಸ ಹಾಗೂ ವಾಹನಗಳ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಗೋಳ್ತಮಜಲು ಗ್ರಾಮದ ಮದಕ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಭಾನುವಾರ ಬೆಳಿಗ್ಗೆ ಗೋಳ್ತಮಜಲು ಗ್ರಾಮದ ಮದಕ ಎಂಬಲ್ಲಿ ಆರೋಪಿ ನಝೀರ್ ಎಂಬಾತ ತನ್ನ ಮನೆಯ ಹಿಂಬಾಗದಲ್ಲಿ, ಆರೋಪಿಗಳಾದ ಅಬೂಬಕ್ಕರ್ ಸಿದ್ಧಿಕ್ ಹಾಗೂ ಸುಲೈಮಾನ್ ಎಂಬವರೊಂದಿಗೆ ಸೇರಿ, ಪರವಾನಿಗೆ ಇಲ್ಲದೇ ಜಾನುವಾರನ್ನು ವಧೆ ಮಾಡಿ, ಮಾಂಸ ಮಾರಾಟಕ್ಕಾಗಿ ಸಾಗಿಸಲು ಯತ್ನಿಸುತ್ತಿದ್ದಾಗ ಬಂಟ್ವಾಳ ನಗರ ಠಾಣಾ ಪಿಎಸ್ಐ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿ, ಆರೋಪಿಗಳ ಪೈಕಿ ಅಬೂಬಕ್ಕರ್ ಸಿದ್ಧಿಕ್ (43) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಸದ್ರಿ ಸ್ಥಳದಲ್ಲಿ ಒಟ್ಟು ಅಂದಾಜು 270 ಕೆ ಜಿ ಮಾಂಸ, ಕೃತ್ಯಕ್ಕೆ ಬಳಸಿದ ಇತರೆ ಸೊತ್ತುಗಳನ್ನು ಹಾಗೂ ಮಾಂಸ ಸಾಗಾಟ ಮಾಡಲು ಉಪಯೋಗಿಸುತ್ತಿದ್ದ ಕೆಎ- 19-ಡಿ 0114 ನೇ ಆಟೋರಿಕ್ಷಾ, ಕೆಎ-21-ಪಿ-1608 ನೇ ನಂಬ್ರದ ಕಾರು, ಕೆಎ 19 ಎಚ್ ಎಫ್ 5460 ನೇ ನಂಬ್ರದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2024 ಕಲಂ 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment