ಸುಳ್ಯ ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಬೆಳ್ಳಾರೆ ಪೊಲೀಸರ ದಾಳಿ : ಆರು ಮಂದಿ ಆರೋಪಿಗಳು ವಶಕ್ಕೆ - Karavali Times ಸುಳ್ಯ ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಬೆಳ್ಳಾರೆ ಪೊಲೀಸರ ದಾಳಿ : ಆರು ಮಂದಿ ಆರೋಪಿಗಳು ವಶಕ್ಕೆ - Karavali Times

728x90

1 February 2024

ಸುಳ್ಯ ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಬೆಳ್ಳಾರೆ ಪೊಲೀಸರ ದಾಳಿ : ಆರು ಮಂದಿ ಆರೋಪಿಗಳು ವಶಕ್ಕೆ

ಸುಳ್ಯ, ಫೆಬ್ರವರಿ 01, 2024 (ಕರಾವಳಿ ಟೈಮ್ಸ್) : ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕಳಂಜ ಮಾಡದ ಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಣ ಪಣವಾಗಿಟ್ಟು ನಡೆಯುತ್ತಿದ್ದ ಕೋಳಿ ಅಂಕ ಜೂಜಾಟ ಸ್ಥಳಕ್ಕೆ ದಾಳಿ ನಡೆಸಿದ ಬೆಳ್ಳಾರೆ ಠಾಣಾ ಪೊಲೀಸರು ಕೃತ್ಯಕ್ಕೆ ಬಳಸಿದ ನಗದು ಹಣ, ವಾಹನ, ಸೊತ್ತುಗಳ ಸಹಿತ 6 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 

ಬಂಧಿತ ಆರೋಪಿಗಳನ್ನು ತಾರನಾಥ, ಐತ್ತ, ಹರೀಶ, ಕೌಶಿಕ್, ಸುನಿಲ್ ಹಾಗೂ ಸುಧೀರ್ ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಸೈ ಸಂತೋಷ್ ಬಿ ಪಿ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. 

ದಾಳಿ ವೇಳೆ ನಗದು ಹಣ, ಅಂಕದ ಕೋಳಿಗಳು, ಕಾಲುಗಳಿಗೆ ಕಟ್ಟಿದ್ದ ಕತ್ತಿ ಹಾಗೂ ಸ್ಥಳದಲ್ಲಿದ್ದ 9 ಮೊಟಾರು ಸೈಕಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗಷ್ಟೆ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಅವರು ಕೋಳಿ ಅಂಕಕ್ಕೆ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಇಂತಹ ಕೋಳಿ ಅಂಕ ನಡೆಸುತ್ತಿರುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಎಚ್ಚರಿಕೆ ಪ್ರಕಟಣೆ ನೀಡಿದ್ದರು. ಎಸ್ಪಿ ಎಚ್ಚರಿಕೆ ಬಳಿಕ ದಾಖಲಾದ ಮೊದಲ ಕೋಳಿ ಅಂಕ ಪ್ರಕರಣ ಇದಾಗಿದೆ.   • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ ಕೋಳಿ ಅಂಕ ಜೂಜಾಟ ಸ್ಥಳಕ್ಕೆ ಬೆಳ್ಳಾರೆ ಪೊಲೀಸರ ದಾಳಿ : ಆರು ಮಂದಿ ಆರೋಪಿಗಳು ವಶಕ್ಕೆ Rating: 5 Reviewed By: karavali Times
Scroll to Top