ಮೋದಿ ಆಡಳಿತದ ಆರ್ಥಿಕ-ಸಾಮಾಜಿಕ ದಿಗ್ಬಂಧನದ ನಡುವೆಯೂ ಸುಭಿಕ್ಷಾ ಬಜೆಟ್ ಮೂಲಕ ಸಿಎಂ ಸಿದ್ದು ರಾಜ್ಯದ ಜನತೆಗೆ ನೆಮ್ಮದಿ ನೀಡಿದ್ದಾರೆ : ವೀರಪ್ಪ ಮೊಯಿಲಿ - Karavali Times ಮೋದಿ ಆಡಳಿತದ ಆರ್ಥಿಕ-ಸಾಮಾಜಿಕ ದಿಗ್ಬಂಧನದ ನಡುವೆಯೂ ಸುಭಿಕ್ಷಾ ಬಜೆಟ್ ಮೂಲಕ ಸಿಎಂ ಸಿದ್ದು ರಾಜ್ಯದ ಜನತೆಗೆ ನೆಮ್ಮದಿ ನೀಡಿದ್ದಾರೆ : ವೀರಪ್ಪ ಮೊಯಿಲಿ - Karavali Times

728x90

18 February 2024

ಮೋದಿ ಆಡಳಿತದ ಆರ್ಥಿಕ-ಸಾಮಾಜಿಕ ದಿಗ್ಬಂಧನದ ನಡುವೆಯೂ ಸುಭಿಕ್ಷಾ ಬಜೆಟ್ ಮೂಲಕ ಸಿಎಂ ಸಿದ್ದು ರಾಜ್ಯದ ಜನತೆಗೆ ನೆಮ್ಮದಿ ನೀಡಿದ್ದಾರೆ : ವೀರಪ್ಪ ಮೊಯಿಲಿ

ಯಾವುದೇ ದೇಶದಲ್ಲೂ ಸರಕಾರದ ಮಂತ್ರಿಗಳು ಅಥವಾ ರಾಜಕಾರಣಿಗಳು ಧಾರ್ಮಿಕ ಕೇಂದ್ರ ಉದ್ಘಾಟಿಸಿದ ಉದಾಹರಣೆಯಿಲ್ಲ : ಪರೋಕ್ಷವಾಗಿ ಮೋದಿಗೆ ತಿವಿದ ಮಾಜಿ ಸಿಎಂ


ಮಂಗಳೂರು, ಫೆಬ್ರವರಿ 18, 2024 (ಕರಾವಳಿ ಟೈಮ್ಸ್) : ಮೋದಿ ದೌರ್ಜನ್ಯದ ಆಡಳಿತದಿಂದ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಕಿಡಿ ಕಾರಿದರು. 

ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ಅಪರಾಹ್ನ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ ದಿಗ್ಬಂಧನದ ನಡುವೆಯೂ ಸುಭಿಕ್ಷಾ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆಮ್ಮದಿ ನೀಡಿದ್ದಾರೆ ಎಂದು ಶ್ಲಾಘಿಸಿದರು. 

ಹಿಂದೂ-ಮುಸ್ಲಿಂ ಒಗ್ಗೂಡಿ ಹೋರಾಡಿದರೆ ಮಾತ್ರ ಸುಭಿಕ್ಷೆ ಸಾಧ್ಯ ಎಂದು ತೋರಿಸಿಕೊಟ್ಟವರಾಗಿದ್ದಾರೆ ಕರಾವಳಿ ಜಿಲ್ಲೆಯ ಜನರು. ಯಾವುದೇ ದೇಶದಲ್ಲಿ ಸರಕಾರ ಅಥವಾ ಅದರ ಮಂತ್ರಿಗಳು ಧಾರ್ಮಿಕ ಕೇಂದ್ರವನ್ನು ಉದ್ಘಾಟಿಸಿದ ಉದಾಹರಣೆಯಿಲ್ಲ. ಮುಸ್ಲಿಂ ರಾಜರ ಆಡಳಿತವಿರುವ ದೇಶಗಳಲ್ಲೂ ಕೂಡಾ ಇದು ನಡೆದಿಲ್ಲ. ಆಡಳಿತ ಬೇರೆ, ಧರ್ಮ ಬೇರೆಯೇ ಎಂಬುದನ್ನು ಎಲ್ಲ ದೇಶಗಳ ನಾಯಕರೂ ಕೂಡಾ ನಿರೂಪಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಮಾತ್ರ ಇದಕ್ಕೆ ವಿರುದ್ದವಾಗಿದೆ ಎನ್ನುವ ಮೂಲಕ ರಾಮಮಂದಿರ ಉದ್ಘಾಟಿಸಿದ ಮೋದಿ ಅವರಿಗೆ ಮೊಯಿಲಿ ಅವರು ಪರೋಕ್ಷವಾಗಿ ತಿವಿದಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದರೆ ದೇಶದಲ್ಲಿ ಕೈ ಗೆಲ್ಲಲಿದೆ ಎಂಬುದನ್ನು ಈ ಬಾರಿಯೂ ಜಿಲ್ಲೆಯ ಜನ ಸಾಬಿತುಪಡಿಸಲಿದ್ದಾರೆ ಎಂದು ಮೊಯಿಲಿ ಭರವಸೆ ವ್ಯಕ್ತಪಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮೋದಿ ಆಡಳಿತದ ಆರ್ಥಿಕ-ಸಾಮಾಜಿಕ ದಿಗ್ಬಂಧನದ ನಡುವೆಯೂ ಸುಭಿಕ್ಷಾ ಬಜೆಟ್ ಮೂಲಕ ಸಿಎಂ ಸಿದ್ದು ರಾಜ್ಯದ ಜನತೆಗೆ ನೆಮ್ಮದಿ ನೀಡಿದ್ದಾರೆ : ವೀರಪ್ಪ ಮೊಯಿಲಿ Rating: 5 Reviewed By: karavali Times
Scroll to Top