ರಾಜ್ಯ ಬಜೆಟ್ ಮೂಲಕ ಕರಾವಳಿಗೆ ಭರಪೂರ ಕೊಡುಗೆ : ಮಂಜುನಾಥ ಭಂಡಾರಿ - Karavali Times ರಾಜ್ಯ ಬಜೆಟ್ ಮೂಲಕ ಕರಾವಳಿಗೆ ಭರಪೂರ ಕೊಡುಗೆ : ಮಂಜುನಾಥ ಭಂಡಾರಿ - Karavali Times

728x90

16 February 2024

ರಾಜ್ಯ ಬಜೆಟ್ ಮೂಲಕ ಕರಾವಳಿಗೆ ಭರಪೂರ ಕೊಡುಗೆ : ಮಂಜುನಾಥ ಭಂಡಾರಿ

ಮಂಗಳೂರು, ಫೆಬ್ರವರಿ 16, 2024 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಪೆÇ್ರೀತ್ಸಾಹ ನೀಡಲಾಗಿದೆ. ರೈತ ಮಹಿಳೆಯರಿಗೆ ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರ ಮೊತ್ತ 3 ಸಾವಿರ ರೂಪಾಯಿ ಹೆಚ್ಚಳ, ಕರಾವಳಿಯಲ್ಲಿ ಬಲಿಷ್ಠವಾಗಿರುವ ಸ್ವಸಹಾಯ ಗುಂಪುಗಳಿಗೆ 10 ಕೋಟಿ ರೂಪಾಯಿ ಮೀಸಲು, ವಾಮಂಜೂರಿನಲ್ಲಿ  ಹಜ್ ಭವನ, ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಆರಂಭ, ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೆÇೀನ್, ಮಂಗಳೂರಿನಲ್ಲಿ  ಅತ್ಯಾಧುನಿಕ ಕೃಷಿ  ಸಂಕೀರ್ಣ ಸ್ಥಾಪನೆ, ಅಡಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಉತ್ತೇಜನ ನೀಡಲಾಗಿದೆ, ಕರಾವಳಿಯ ಹಿರಿಯ ಪತ್ರಕರ್ತ ರಘುರಾಮ ವಡ್ಡರ್ಸೆ ಹೆಸರಲ್ಲಿ ಪ್ರಶಸ್ತಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಆರಂಭಿಸಿರುವುದು ಒಳ್ಳೆಯ ಯೋಜನೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಶ್ಲಾಘಿಸಿದ್ದಾರೆ.   • Blogger Comments
  • Facebook Comments

0 comments:

Post a Comment

Item Reviewed: ರಾಜ್ಯ ಬಜೆಟ್ ಮೂಲಕ ಕರಾವಳಿಗೆ ಭರಪೂರ ಕೊಡುಗೆ : ಮಂಜುನಾಥ ಭಂಡಾರಿ Rating: 5 Reviewed By: karavali Times
Scroll to Top