ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಲಕ್ಷಾಂತರ ಮೌಲ್ಯದ ಸೊತ್ತು ವಶಪಡಿಸಿಕೊಂಡ ವಿಶೇಷ ಪೊಲೀಸ್ ತಂಡ - Karavali Times ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಲಕ್ಷಾಂತರ ಮೌಲ್ಯದ ಸೊತ್ತು ವಶಪಡಿಸಿಕೊಂಡ ವಿಶೇಷ ಪೊಲೀಸ್ ತಂಡ - Karavali Times

728x90

15 March 2024

ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಲಕ್ಷಾಂತರ ಮೌಲ್ಯದ ಸೊತ್ತು ವಶಪಡಿಸಿಕೊಂಡ ವಿಶೇಷ ಪೊಲೀಸ್ ತಂಡ

ಬಂಟ್ವಾಳ, ಮಾರ್ಚ್ 15, 2024 (ಕರಾವಳಿ ಟೈಮ್ಸ್) : ಅಡ್ಯನಡ್ಕ ಕರ್ನಾಟಕ  ಬ್ಯಾಂಕ್ ಕಳವು ಪ್ರಕರಣ ಬೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿಶೇಷ ತಂಡ ಮೂವರು ಕುಖ್ಯಾತ ಕಳ್ಳರನ್ನು ಅಧಿಕೃತವಾಗಿ ಬಂಧಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 

ಫೆಬ್ರವರಿ 7 ರ ಸಂಜೆಯಿಂದ ಫೆ 8 ರ ಬೆಳಗ್ಗಿನ ಅವಧಿಯಲ್ಲಿ ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ, ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿರುವ, ಕರ್ನಾಟಕ ಬ್ಯಾಂಕಿನಿಂದ 17,28,735/- ರೂಪಾಯಿ  ನಗದು ಹಾಗೂ 696.21 ಗ್ರಾಂ ಚಿನ್ನಭರಣ ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಲಾಗಿತ್ತು. ಪ್ರಕರಣದ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡ ಪೊಲೀಸರು ಮಾರ್ಚ್ 10 ರಂದು ಆರೋಪಿಗಳಾದ ಬಿ ಮೂಡ ಗ್ರಾಮದ ಗೂಡಿನಬಳಿ ಮಸೀದಿ ಬಳಿ ನಿವಾಸಿ ಮಹಮ್ಮದ್ ರಫೀಕ್ @ ಗೂಡಿನಬಳಿ ರಫೀಕ್ (35), ಕೇರಳ ರಾಜ್ಯದ ಮಂಜೇಶ್ವರ ತಾಲೂಕು, ಬಾಯಾರು ಗ್ರಾಮದ ನಿವಾಸಿಗಳಾದ ಇಬ್ರಾಹಿಂ ಕಲಂದರ್ (41) ಹಾಗೂ ದಯಾನಂದ ಎಸ್ (37) ಎಂಬವರುಗಳನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳಿಂದ 2,40,700/- ರೂಪಾಯಿ ನಗದು ಹಣ, ಕಳ್ಳತನದ ಹಣದಿಂದ ಖರೀದಿಸಿದ 2 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ಸಾಮಾಗ್ರಿಗಳು, 12,48,218/- ರೂಪಾಯಿ ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ01 ಎನ್‍ಜಿ2227 ನೊಂದಣಿ ಸಂಖ್ಯೆಯ ಬ್ರೀಝಾ ಕಾರು, ಗ್ಯಾಸ್ ಕಟರ್ ಹಾಗೂ ಇತರೆ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ವಾದೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ 25,70,918/- ರೂಪಾಯಿ ಎಂದು ಅಂದಾಜಿಸಲಾಗಿದೆ. 

ಆರೋಪಿ ಮಹಮ್ಮದ್ ರಫೀಕ್ @ ಗೂಡಿನ ಬಳಿ ರಫೀಕ್ ಎಂಬಾತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ 2, ವೇಣೂರು ಪೆÇಲೀಸ್ ಠಾಣೆಯಲ್ಲಿ 2, ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ 1, ವಿಟ್ಲ ಪೆÇಲೀಸ್ ಠಾಣೆಯಲ್ಲಿ 1, ಮಂಗಳೂರು ನಗರ ಪೂರ್ವ ಪೆÇಲೀಸ್ ಠಾಣೆಯಲ್ಲಿ 1, ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ 1, ಮಂಗಳೂರು ನಗರದ ದಕ್ಷಿಣ ಪೆÇಲೀಸ್ ಠಾಣೆಯಲ್ಲಿ 4, ಮಂಗಳೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ 1, ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 6, ಮಂಗಳೂರು ನಗರದ ಪೂರ್ವ ಪೆÇಲೀಸ್ ಠಾಣೆಯಲ್ಲಿ 1, ಉಡುಪಿ ಜಿಲ್ಲೆಯಲ್ಲಿ 3 ಸಹಿತ ಒಟ್ಟು 23 ಪ್ರಕರಣಗಳು ದಾಖಲಾಗಿವೆ. 

ಇಬ್ರಾಹಿಂ ಕಲಂದರ್ ಎಂಬಾತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 2, ವಿಟ್ಲ ಪೆÇಲೀಸ್ ಠಾಣೆಯಲ್ಲಿ 3, ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ 1, ಮೂಡಬಿದ್ರೆ ಠಾಣೆಯಲ್ಲಿ 1, ಕೇರಳ ರಾಜ್ಯದ ಕುಂಬ್ಳೆ ಪೆÇಲೀಸ್ ಠಾಣೆಯಲ್ಲಿ 1 ಸಹಿತ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತವೆ.

ದಯಾನಂದ ಎಸ್ ಎಂಬಾತನ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತವೆ.

ಸದ್ರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳ ಬಂಧನ ಕಾರ್ಯ ಬಾಕಿ ಇದ್ದು, ಅವರ ಪತ್ತೆಗಾಗಿ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿವೆ. 

ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್, ಎಡಿಶನಲ್ ಎಸ್ಪಿಗಳಾದ ಧರ್ಮಪ್ಪ ಎನ್ ಎಂ ಹಾಗೂ ರಾಜೇಂದ್ರ ಡಿ ಎಸ್ ಅವರ ಮಾರ್ಗದರ್ಶನದಂತೆ ಬಂಟ್ವಾಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ, ವಿಟ್ಲ ಪೆÇಲೀಸ್ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಈ ಅವರ ನೇತೃತ್ವದಲ್ಲಿ ಪಿಎಸ್ಸೈಗಳಾದ ನಂದಕುಮಾರ್, ಉದಯರವಿ, ಹರೀಶ್ ಕುಮಾರ್, ವಿದ್ಯಾ ಕೆ ಜೆ, ಸಿಬ್ಬಂದಿಗಳಾದ ವೆಂಕಟರಮಣ ಗೌಡ, ಪ್ರವೀಣ್ ಮೂರುಗೋಳಿ, ಉದಯ ರೈ, ರಕ್ಷಿತ್ ರೈ, ಪ್ರವೀಣ್ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್ ರಾವ್, ಶ್ರೀಧರ ಸಿ ಎಸ್, ಜಗದೀಶ್ ಅತ್ತಾಜೆ, ಹೇಮರಾಜ್, ಅಶೋಕ್, ವಿವೇಕ್ ಕೆ, ಕುಮಾರ್ ಎಚ್ ಕೆ, ಸಂಪತ್, ದಿವಾಕರ್, ಸಂತೋಷ್, ಕುಮಾರ್ ಮಾಯಪ್ಪರವರು ಈ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಸದ್ರಿ ಪೊಲೀಸ್ ತಂಡಕ್ಕೆ ಜಿಲ್ಲಾ ಎಸ್ಪಿ ಅವರು ನಗದು ಬಹುಮಾನ ಘೋಷಿಸಿರುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಲಕ್ಷಾಂತರ ಮೌಲ್ಯದ ಸೊತ್ತು ವಶಪಡಿಸಿಕೊಂಡ ವಿಶೇಷ ಪೊಲೀಸ್ ತಂಡ Rating: 5 Reviewed By: karavali Times
Scroll to Top