ಪಣಕಜೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಮೂರೂವರೆ ವರ್ಷದ ಮಗು ದಾರುಣ ಮೃತ್ಯು - Karavali Times ಪಣಕಜೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಮೂರೂವರೆ ವರ್ಷದ ಮಗು ದಾರುಣ ಮೃತ್ಯು - Karavali Times

728x90

17 March 2024

ಪಣಕಜೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಮೂರೂವರೆ ವರ್ಷದ ಮಗು ದಾರುಣ ಮೃತ್ಯು

ಬಂಟ್ವಾಳ, ಮಾರ್ಚ್ 17, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಡಿಕ್ಕಿ ಹೊಡೆದು ಮೂರೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಮೃತ ಮಗುವನ್ನು ಚಂದ್ರಶೇಖರ ಎಂಬವರ ಮಗ ಕೌಶಿಕ್ (3 ವರ್ಷ 5 ತಿಂಗಳು) ಎಂದು ಹೆಸರಿಸಲಾಗಿದೆ. ಕೌಶಿಕ್ ತನ್ನ ಸಹೋದರಿ ವಂಶಿಕಾ ಜೊತೆ ಸಂಬಂಧಿ ಪ್ರವೀಣ ಎಂಬವರ ಮನೆಗೆ ಬಂದು ವಾಪಾಸು ತಮ್ಮ ಮನೆಗೆ ತೆರಳಲು ರಸ್ತೆ ಬದಿ ನಿಂತುಕೊಂಡಿದ್ದ ವೇಳೆ ಅಬ್ದುಲ್ ರಹಿಮಾನ್ ಅವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಅಪಘಾತದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಕೌಶಿಕ್ ನನ್ನು ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮಗು ಮೃತಪಟ್ಟಿದೆ ಎನ್ನಲಾಗಿದೆ.

ಈ ಬಗ್ಗೆ ಮಗುವಿನ ಸಂಬಂಧಿ ಸೋಣಂದೂರು-ಪಣಕಜೆ ನಿವಾಸಿ ಪ್ರವೀಣ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಣಕಜೆ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಮೂರೂವರೆ ವರ್ಷದ ಮಗು ದಾರುಣ ಮೃತ್ಯು Rating: 5 Reviewed By: karavali Times
Scroll to Top