ಕಡಬ, ಮಾರ್ಚ್ 12, 2024 (ಕರಾವಳಿ ಟೈಮ್ಸ್) : ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿನ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ನಗದು ಹಣ ಎಗರಿಸಿದ ಘಟನೆ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ನೆಬಿಸಾ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ನೆಬಿಸಾ ಅವರು ತನ್ನ ಮಗಳು ಹಾಗೂ ಅಳಿಯ, ಮಕ್ಕಳೊಂದಿಗೆ ವಾಸವಾಗಿದ್ದು, ಮಾ 7 ರಂದು ಮಗಳ ಹೆರಿಗೆಗಾಗಿ ನೆಬಿಸಾ ಹಾಗೂ ಮನೆ ಮಂದಿಯೆಲ್ಲಾ ಮನೆಗೆ ಬೀಗ ಹಾಕಿ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಮಾ 11 ರಂದು ಮನೆಯನ್ನು ನೋಡಿಕೊಂಡು ಬರಲು ಸಂಬಂಧಿ ಯುವತಿ ಬಂದಾಗ ಮನೆಯ ಹಿಂಬಾಗಿಲು ಮುರಿದಿರುವುದು ಕಂಡು ಬಂದು ಪರಿಶೀಲನೆ ನಡೆಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಕಪಾಟಿನಲ್ಲಿದ್ದ 1,08,000/- ನಗದು ಹಣ ಹಾಗೂ 5.20 ಲಕ್ಷ ರೂಪಾಯಿ ಮೌಲ್ಯದ 13 ಪವನ್ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment