ಪಾಣೆಮಂಗಳೂರು : ಮರಳು ಕದ್ದು ಅಕ್ರಮ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಪೊಲೀಸರು, ಮರಳು, ಲಾರಿ ಸಹಿತ ನಾಲ್ವರು ಆರೋಪಿಗಳು ವಶಕ್ಕೆ - Karavali Times ಪಾಣೆಮಂಗಳೂರು : ಮರಳು ಕದ್ದು ಅಕ್ರಮ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಪೊಲೀಸರು, ಮರಳು, ಲಾರಿ ಸಹಿತ ನಾಲ್ವರು ಆರೋಪಿಗಳು ವಶಕ್ಕೆ - Karavali Times

728x90

21 March 2024

ಪಾಣೆಮಂಗಳೂರು : ಮರಳು ಕದ್ದು ಅಕ್ರಮ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಪೊಲೀಸರು, ಮರಳು, ಲಾರಿ ಸಹಿತ ನಾಲ್ವರು ಆರೋಪಿಗಳು ವಶಕ್ಕೆ

ಬಂಟ್ವಾಳ, ಮಾರ್ಚ್ 21, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿ ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೆÇಲೀಸರು ಅಕ್ರಮ ಮರಳು ಸಾಗಾಟ ನಡೆಸುತ್ತಿರುವ ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ನಾಲ್ಕು ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಅಬ್ದುಲ್ ರಹಿಮಾನ್ ಕನ್ಯಾನ (21), ಮಹಮ್ಮದ್ ಸಾದಿಕ್ ಅಡ್ಯಾರು, ಗೌತಮ್ ವಿಟ್ಲ  (21) ಹಾಗೂ ಗುಡ್ಡಪ್ಪ ಗೌಡ ವೀರಕಂಭ ಎಂದು ಹೆಸರಿಸಲಾಗಿದೆ.

ಗುರುವಾರ ಬೆಳಿಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣಾ ಪಿಎಸ್‍ಐ ರಾಮಕೃಷ್ಣ ನೇತೃತ್ವದ ಪೆÇಲೀಸರು ನರಿಕೊಂಬು ಗ್ರಾಮದ ನೆಹರು ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಈ ಅಕ್ರಮ ಮರಳು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಸದ್ರಿ ಮರಳನ್ನು ವಳಚ್ಚಿಲ್ ನೇತ್ರಾವತಿ ನದಿ ದಡದಿಂದ ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಕಳವು ಮಾಡಿ ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಮರಳು ಕದ್ದು ಅಕ್ರಮ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಪೊಲೀಸರು, ಮರಳು, ಲಾರಿ ಸಹಿತ ನಾಲ್ವರು ಆರೋಪಿಗಳು ವಶಕ್ಕೆ Rating: 5 Reviewed By: karavali Times
Scroll to Top