ಬಂಟ್ವಾಳ : ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ, ಮತಗಟ್ಟೆಗಳತ್ತ ತೆರಳಿದ ಅಧಿಕಾರಿಗಳು - Karavali Times ಬಂಟ್ವಾಳ : ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ, ಮತಗಟ್ಟೆಗಳತ್ತ ತೆರಳಿದ ಅಧಿಕಾರಿಗಳು - Karavali Times

728x90

25 April 2024

ಬಂಟ್ವಾಳ : ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ, ಮತಗಟ್ಟೆಗಳತ್ತ ತೆರಳಿದ ಅಧಿಕಾರಿಗಳು

ಬಂಟ್ವಾಳ, ಎಪ್ರಿಲ್ 25, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಗುರುವಾರ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. 

ಐವರು ಮಾಸ್ಟರ್ ಟ್ರೈನರ್ ಗಳ ನೇತೃತ್ವದಲ್ಲಿ 25 ಸೆಕ್ಟರ್ ಅಧಿಕಾರಿಗಳು 25 ಕೊಠಡಿಗಳಲ್ಲಿ ಮಸ್ಟರಿಂಗ್ ಕಾರ್ಯವನ್ನು ನಡೆಸಿಕೊಟ್ಟರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಗೂ ತಲಾ ಒಬ್ಬರು ಪಿ ಆರ್ ಓ ಒಬ್ಬರು ಎ ಪಿ ಆರ್ ಓ ಮತ್ತು ಇಬ್ಬರು ಪಿ ಓ ಹಾಗೂ ಒಬ್ಬರು ಡಿ ಗ್ರೂಪ್ ಮತ್ತು ಒಬ್ಬರು ಪೆÇಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 92 ವಾಹನ ಪಥಗಳ ವ್ಯವಸ್ಥೆ ರೂಪಿಸಲಾಗಿದ್ದು ಎಲ್ಲ ಮತಗಟ್ಟೆ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ಚುನಾವಣಾ ಸಾಮಾಗ್ರಿಗಳೊಂದಿಗೆ ತೆರಳಿದರು. 

118 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ 14 ಮೈಕ್ರೋ ಆಬ್ಸರ್ ವರ್ ಗಳನ್ನು ನಿಯೋಜಿಸಲಾಗಿದೆ. ಐದು ಸಖಿ ಮತಗಟ್ಟೆಗಳಿದ್ದು ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಒಂದು ಸಾಂಪ್ರದಾಯಿಕ ಮತಗಟ್ಟೆ, ಒಂದು ಯುವ ಮತದಾರರ ಮತಗಟ್ಟೆ, ಒಂದು ವಿಶೇಷ ಚೇತನರ ಮತಗಟ್ಟೆ ಕಾರ್ಯನಿರ್ವಹಿಸಲಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರು ಮತ್ತು ಜಿಲ್ಲಾ ಎಸ್ಪಿ ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಡಾ ಉದಯ ಶೆಟ್ಟಿ, ತಹಶೀಲ್ದಾರ್ ಅರ್ಚನಾ ಭಟ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಗಳು, ಗ್ರಾಮ ಸಹಾಯಕರು, ಪೆÇಲೀಸ್ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ, ಮತಗಟ್ಟೆಗಳತ್ತ ತೆರಳಿದ ಅಧಿಕಾರಿಗಳು Rating: 5 Reviewed By: karavali Times
Scroll to Top