ಬಂಟ್ವಾಳ, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : ಅಕ್ರಮ ದನ ಸಾಗಾಟದ ಅಟೋ ರಿಕ್ಷಾವನ್ನು ಪೊಲೀಸರು ಬೆನ್ನಟ್ಟಿದಾಗ ಜಾನುವಾರನ್ನು ಅಟೋ ರಿಕ್ಷಾದಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾದ ಘಟನೆ ಕಾರಿಂಜ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ ಕಾರಿಂಜ ದರ್ಖಾಸು ಕಡೆಯಿಂದ ಬರ್ಕಟ ಕ್ರಾಸ್ ಕಡೆಗೆ ಅಟೋ ರಿಕ್ಷಾದಲ್ಲಿ ದನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಪಿಎಸ್ಸೈ ಮೂರ್ತಿ ನೇತೃತ್ವದ ಪೊಲೀಸರು ಸ್ಥಳಕ್ಕೆ ತೆರಳಿ ಅಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದಾಗ ಅಟೋ ರಿಕ್ಷಾ ಚಾಲಕ ನಿಲ್ಲಿಸದೆ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಸಂದರ್ಭ ಪೊಲೀಸರು ಬೆನ್ನಟ್ಟಿದಾಗ ಅಟೋ ರಿಕ್ಷಾ ಚಾಲಕ ರಿಕ್ಷಾದಲ್ಲಿದ್ದ ಜಾನುವಾರನ್ನು ರಿಕ್ಷಾದಿಂದ ಇಳಿಸಿ ಪರಾರಿಯಾಗಿರುತ್ತಾನೆ.
ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಅಟೋ ರಿಕ್ಷಾ ಚಾಲಕ ಮಹಮ್ಮದ್ ಮುಸ್ತಫ ಹಾಗೂ ಅಟೋದಲ್ಲಿದ್ದ ಇನ್ನೋರ್ವ ವ್ಯಕ್ತಿ ಲಿಂಗಪ್ಪ ಎಂದು ತಿಳಿದು ಬಂದಿದೆ. ದನವನ್ನು ಯಾವುದೇ ಪರವಾ£ಗೆ ಇಲ್ಲದೆ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದನವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment