ಬಂಟ್ವಾಳ, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ಸಂಬಂಧಿ ಯುವಕನನ್ನು ಮನೆಗೆ ಕರೆದು ತಂದೆ-ಮಕ್ಕಳು ಸೇರಿ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಬಿ ಸಿ ರೋಡು ಸಮೀಪದ ಪರ್ಲಿಯ ಎಂಬಲ್ಲಿ ಎ 20 ರಂದು ರಾತ್ರಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡ ಯುವಕನನ್ನು ಬಿ ಮೂಡ ಗ್ರಾಮದ ಬೈಕಂಡಿ ನಿವಾಸಿ ಮೊಹಮ್ಮದ್ ಝಕರಿಯಾ (18) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಪರ್ಲಿಯ ನಿವಾಸಿಗಳಾದ ಮುಹಮ್ಮದ್ ಶಂಶೀರ್, ಮಹಮ್ಮದ್ ಸನೀರ ಹಾಗೂ ಅವರ ತಂದೆ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ.
ಶಂಶೀರ ಅವರು ತನ್ನ ಸಂಬಂಧಿ ಝಕರಿಯ ಅವರನ್ನು ಎ 20 ರಂದು ರಾತ್ರಿ ಮನೆಗೆ ಕರೆಸಿ ಮನೆಯಲ್ಲಿದ್ದ ಆರೋಪಿಗಳಾದ ಶಂಶೀರ, ಆತನ ತಮ್ಮ ಮಹಮ್ಮದ್ ಸನೀರ ಹಾಗೂ ತಂದೆ ಅಬ್ದುಲ್ ಖಾದರ್ ಎಂಬವರುಗಳು ಏಕಾಏಕಿಯಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿ, ಖಾರದ ಪುಡಿ ಎರಚಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಝಕರಿಯಾ ತನ್ನ ತಂದೆಗೆ ಕರೆ ಮಾಡಿ, ಅವರ ಸಹಾಯದಿಂದ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ವತ್ರೆಗೆ ದಾಖಲಾಗಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2024, ಕಲಂ 504, 506, 323, 324 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment