ಬಂಟ್ವಾಳ : ಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ, ಸಿದ್ದತೆಗೆ ಮೆಚ್ಚುಗೆ - Karavali Times ಬಂಟ್ವಾಳ : ಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ, ಸಿದ್ದತೆಗೆ ಮೆಚ್ಚುಗೆ - Karavali Times

728x90

19 April 2024

ಬಂಟ್ವಾಳ : ಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ, ಸಿದ್ದತೆಗೆ ಮೆಚ್ಚುಗೆ

ಬಂಟ್ವಾಳ, ಎಪ್ರಿಲ್ 19, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಶುಕ್ರವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿದರು. 

ಬಿ ಮೂಡ ಗ್ರಾಮದ ಕೊಡಂಗೆ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 122, 123 ಮತ್ತು 124 ಗಳಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಹಶೀಲ್ದಾರ್ ಅರ್ಚನಾ ಭಟ್, ಚುನಾವಣಾ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಕಂದಾಯ ನಿರೀಕ್ಷಕರಾದ ಜನಾದರ್Àನ ಜೆ, ವಿಜಯ್ ಆರ್, ಗ್ರಾಮ ಆಡಳಿತ ಅಧಿಕಾರಿ ಕರಿಬಸಪ್ಪ ನಾಯಕ್, ಮತಗಟ್ಟೆ ಅಧಿಕಾರಿಗಳಾದ ಜ್ಯೋತಿ, ಸೌಮ್ಯ, ಆಶಾ ಈ ಸಂದರ್ಭ ಜೊತೆಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ, ಸಿದ್ದತೆಗೆ ಮೆಚ್ಚುಗೆ Rating: 5 Reviewed By: karavali Times
Scroll to Top