ಹುಬ್ಬಳ್ಳಿಯ ನೇಹಾ ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ ಕಾಲೆಳೆದ ನೆಟ್ಟಿಗರಿಂದ ಸೌಜನ್ಯ ಘಟನೆ ಸಹಿತ ಇತಿಹಾಸದ ಮನನ ಮಾಡಿ ಜಾಲ ತಾಣದಲ್ಲಿ ಪೋಸ್ಟರ್ ಗಳು ವೈರಲ್ - Karavali Times ಹುಬ್ಬಳ್ಳಿಯ ನೇಹಾ ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ ಕಾಲೆಳೆದ ನೆಟ್ಟಿಗರಿಂದ ಸೌಜನ್ಯ ಘಟನೆ ಸಹಿತ ಇತಿಹಾಸದ ಮನನ ಮಾಡಿ ಜಾಲ ತಾಣದಲ್ಲಿ ಪೋಸ್ಟರ್ ಗಳು ವೈರಲ್ - Karavali Times

728x90

24 April 2024

ಹುಬ್ಬಳ್ಳಿಯ ನೇಹಾ ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ ಕಾಲೆಳೆದ ನೆಟ್ಟಿಗರಿಂದ ಸೌಜನ್ಯ ಘಟನೆ ಸಹಿತ ಇತಿಹಾಸದ ಮನನ ಮಾಡಿ ಜಾಲ ತಾಣದಲ್ಲಿ ಪೋಸ್ಟರ್ ಗಳು ವೈರಲ್

ಮಂಗಳೂರು, ಎಪ್ರಿಲ್ 24, 2024 (ಕರಾವಳಿ ಟೈಮ್ಸ್) : ಹುಬ್ಬಳ್ಳಿಯ ನೇಹಾ ಹತ್ಯೆಯನ್ನು ಚುನಾವಣಾ ಸಂದರ್ಭದಲ್ಲಿ ರಾಜಕೀಯಗೊಳಿಸಿ ಬಿಜೆಪಿ ಹಾಗೂ ಸಂಘ-ಪರಿವಾರ ಗೊಂದಲ ಸೃಷ್ಟಿಸುತ್ತಿರುವ ಹಿನ್ನಲೆಯಲ್ಲಿ ನೆಟ್ಟಿಗರು ಕಳೆದ ಕೆಲ ಸಮಯಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಧರ್ಮೀಯರಿಂದಲೇ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಹಿಂದೂ ಯುವತಿಯರ ಇತಿಹಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಬಿಜೆಪಿಯ ಕುಚೋದ್ಯವನ್ನು ಟೀಕಿಸಿ ಪ್ರಶ್ನಿಸುತ್ತಿರುವ ಸನ್ನಿವೇಶ ಕಂಡು ಬರುತ್ತಿದೆ. 

12 ವರ್ಷಗಳ ಹಿಂದೆ ಹುಬ್ಬಳ್ಳಿಯ ನೇಹಾ ಘಟನೆಗಿಂತಲೂ ಭೀಕರ ಘಟನೆ ಧರ್ಮಸ್ಥಳದಲ್ಲಿ ನಡೆದಿತ್ತು. ನವರಾತ್ರಿ ಉಪವಾಸ ವೃತದಲ್ಲಿದ್ದ ಸೌಜನ್ಯಳನ್ನು ಗ್ಯಾಂಗ್ ರೇಪ್ ಮಾಡಿ ಹತ್ಯೆ ಮಾಡಲಾಗಿತ್ತು. ಆಗ ಬಿಜೆಪಿ ಹಾಗೂ ಸಂಘ ಪರಿವಾರ ಮೌನಕ್ಕೆ ಶರಣಾಗಿತ್ತು. ಬೆಳ್ತಂಗಡಿ ಶಾಂತವಾಗಿತ್ತು. 

3 ವರ್ಷಗಳ ಹಿಂದೆ ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯರನ್ನು ಅದೇ ಕಾಲೇಜಿನ ವಿದ್ಯಾರ್ಥಿಗಳು ಗ್ಯಾಂಗ್ ರೇಪ್ ಮಾಡಿ ವೀಡಿಯೋ ಮಾಡಿ ವೈರಲ್ ಮಾಡಿದ್ದರು. ಆಗ ಕೂಡಾ ಬಿಜೆಪಿ ಸಂಘ ಪರಿವಾ ಮೌನಕ್ಕೆ ಶರಣಾಗಿದ್ದರು. ಪುತ್ತೂರು ಶಾಂತವಾಗಿತ್ತು. 

2 ವರ್ಷಗಳ ಹಿಂದೆ ಹುಬ್ಬಳ್ಳಿಯ ನೇಹಾ ರೀತಿಯ ಘಟನೆ ಪುತ್ತೂರಿನ ಅನಂತಾಡಿಯಲ್ಲಿ ನಡೆದಿತ್ತು. ಶಕುಂತಳಾ ಎಂಬ ಮಹಿಳೆಯನ್ನು ಶ್ರೀಧರ ಎಂಬಾತ ಪ್ರೇಮದ ಬಲೆಯಲ್ಲಿ ಕೆಡವಲು ಯತ್ನಿಸಿ ವಿಫಲನಾಗಿ ಹಾಡುಹಗಲೇ ಹೆದ್ದಾರಿ ಇರಿದು ಕೊಂದಿದ್ದ. ಆಗ ಕೂಡಾ ಬಿಜೆಪಿ ಸಂಘಪರಿವಾರ ಮೌನಕ್ಕೆ ಶರಣಾಗಿತ್ತು. ಪುತ್ತೂರು ಶಾಂತವಾಗಿತ್ತು. 

15 ತಿಂಗಳ ಹಿಂದೆ ಹುಬ್ಬಳ್ಳಿಯ ನೇಹಾ ರೀತಿಯ ಘಟನೆ ಪುತ್ತೂರಿನ ಮುಂಡೂರಿನಲ್ಲಿ ನಡೆದಿತ್ತು. ಜಯಶ್ರೀ ಎಂಬ ಯುವತಿಯನ್ನು ಉಮೇಶ್ ಎಂಬ ಯುವಕ ಮನೆಗೆ ನುಗ್ಗಿ ಕೊಲೆ ಮಾಡಿದ್ದ. ಆಗ ಕೂಡಾ ಬಿಜೆಪಿ ಸಂಘಪರಿವಾರ ಮೌನಕ್ಕೆ ಶರಣಾಗಿತ್ತು. ಪುತ್ತೂರು ಶಾಂತವಾಗಿತ್ತು. 

6 ತಿಂಗಳ ಹಿಂದೆ ಹುಬ್ಬಳ್ಳಿಯ ನೇಹಾ ರೀತಿಯ ಘಟನೆ ಪುತ್ತೂರಿನಲ್ಲಿ ನಡೆದಿತ್ತು. ಉದ್ಯೋಗಿ ಗೌರಿಯನ್ನು ಆಕೆಯ ಲವರ್ ಪದ್ಮರಾಜ್ ಮಹಿಳಾ ಠಾಣಾ ಮುಂಭಾಗದಲ್ಲಿ, ಮಹಾಲಿಂಗೇಶ್ವರ ದೇವರ ದ್ವಾರದ ಅಡಿಯಲ್ಲೇ ಚೂರಿ ಇರಿದು ಹತ್ಯೆಗೈದಿದ್ದ. ಆಗ ಕೂಡಾ ಬಿಜೆಪಿ ಸಂಘಪರಿವಾರ ಮೌನಕ್ಕೆ ಶರಣಾಗಿತ್ತು. ಪುತ್ತೂರು ಶಾಂತವಾಗಿತ್ತು. 

ಎಂಬಿತ್ಯಾದಿ ಒಕ್ಕಣೆಗಳ ಸಹಿತ ದಾರುಣ ಘಟನೆಗಳ ಬಗ್ಗೆ ಸಚಿತ್ರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿ ಬಿಜೆಪಿ ಹಾಗೂ ಸಂಘ-ಪರಿವಾರದ ಕಾಲೆಳೆದಿರುವ ನೆಟ್ಟಿಗರು ಸ್ವಧಮೀಯರಿಂದ ಹತ್ಯೆಯಾದರೆ, ಅನ್ಯಾಯ ಆದರೆ ಅದಕ್ಕೆ ಬೆಲೆಯೇ ಇಲ್ಲವೇ? ಅನ್ಯ ಧರ್ಮೀರಿಂದಾದರೆ ಅದನ್ನು ಅನ್ಯಾಯ ಎಂದು ಬಿಂಬಿಸಿ ರಾಜಕೀಯ ಲಾಭಕ್ಕೆ ಪ್ರಯತ್ನಿಸುವುದು ಎಷ್ಟು ಸರಿ? ಈ ಮೂಲಕ ಶಾಂತವಾಗಿರುವ ಸಮಾಜವನ್ನು ಸಂಘರ್ಷಕ್ಕೆ ಎಳೆದು ತರುವುದು ಸರಿಯೇ ಎಂಬಿತ್ಯಾದಿಯಾಗಿ ಪ್ರಶ್ನಿಸಿದ ಪೋಸ್ಟರ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಅಗುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಹುಬ್ಬಳ್ಳಿಯ ನೇಹಾ ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ ಕಾಲೆಳೆದ ನೆಟ್ಟಿಗರಿಂದ ಸೌಜನ್ಯ ಘಟನೆ ಸಹಿತ ಇತಿಹಾಸದ ಮನನ ಮಾಡಿ ಜಾಲ ತಾಣದಲ್ಲಿ ಪೋಸ್ಟರ್ ಗಳು ವೈರಲ್ Rating: 5 Reviewed By: karavali Times
Scroll to Top