ಪುತ್ತೂರು, ಎಪ್ರಿಲ್ 01, 2024 (ಕರಾವಳಿ ಟೈಮ್ಸ್) : ಪಾನ್ ಬೀಡಾ ಅಂಗಡಿಯಲ್ಲಿ ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಲಾಟರಿ ಹಾಗೂ ನಗದು ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಪುತ್ತೂರು ಕಸಬಾ ಗ್ರಾಮದ ಲಿನೆಟ್ ಜಂಕ್ಷನ್ನಿನ ಉದಯಗಿರಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಇರುವ ಪಾನ್ ಬೀಡ ಅಂಗಡಿಯಲ್ಲಿ, ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ ಎಂಬಾತ ನಿಷೇದಿತ ಕೇರಳದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪುತ್ತೂರು ನಗರ ಪೆÇಲೀಸ್ ಠಾಣಾ ಪಿಎಸ್ಸೈ ನಂದಕುಮಾರ್ ಎಂ ಎಂ ಅವರ ನೇತೃತ್ವದ ಪೊಲೀಸರು 1,550/- ರೂಪಾಯಿ ಮೌಲ್ಯದ 31 ಲಾಟರಿಗಳನ್ನು ಹಾಗೂ 1,100/- ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದು, ಆರೋಪಿ ವಿರುದ್ದ ಅಪರಾಧ ಕ್ರಮಾಂಕ 33/2024 ಕಲಂ 5, 7(3) ದಿ ಲಾಟರೀಸ್ (ರೆಗ್ಯುಲೇಷನ್) ಆಕ್ಟ್ 1998 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





















0 comments:
Post a Comment