ಬಂಟ್ವಾಳ, ಮೇ 21, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಹಾಜಿ ಕೆ ಐ ಅಶ್ರಫ್ ಕಾಮಿಲ್ ಸಖಾಫಿ ಸವಣೂರು ಅವರ ಶಿಷ್ಯಂದಿರ ಸಂಘಟನೆ ಮಿಫ್ತಾಹತ್ತ್ವಲಬಾ ಸಾಹಿತ್ಯ ಸಮಾಜ (ಎಂ ಟಿ ಎಸ್ ಎಸ್) ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಬಾಸಿತ್ ಸುಳ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ ಎ ಸಲ್ಮಾನ್ ಸವಣೂರು ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಇಲ್ಲಿನ ಮಂಬ-ಉಲ್ ಉಲೂಂ ದರ್ಸ್ ಸಭಾಂಗಣದಲ್ಲಿ ಮಸೀದಿ ಮುದರ್ರಿಸ್ ಹಾಜಿ ಕೆ ಐ ಅಶ್ರಫ್ ಕಾಮಿಲ್ ಸಖಾಫಿ ಸವಣೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಸಭೆಯಲ್ಲಿ ಮದ್ರಸ ಮುಖ್ಯೋಪಾಧ್ಯಾಯ ಉಸ್ಮಾನ್ ಮದನಿ, ಅಧ್ಯಾಪಕರಾದ ರಫೀಕ್ ಹಿಮಮಿ, ಇಸ್ಮಾಯಿಲ್ ಫುರ್ಖಾನಿ ಉಪಸ್ಥಿತರಿದ್ದರು.
ಉಳಿದಂತೆ ಉಪಾಧ್ಯಕ್ಷರಾಗಿ ಫವಾಝ್ ನಂದಾವರ, ಕೋಶಾಧಿಕಾರಿಯಾಗಿ ಅನಸ್ ಕಲ್ಲಡ್ಕ, ಜೊತೆ ಕಾರ್ಯದರ್ಶಿಗಳಾಗಿ ತಬ್ಶೀರ್ ಗೋಳಿಪಡ್ಪು ಹಾಗೂ ಫಾಯಿಝ್ ಗೋಳಿಪಡ್ಪು ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ತ್ವಲ್ಹತ್ ಮೂರ್ಜೆ, ನೌಫಲ್ ಕುಕ್ಕಾಜೆ, ಶಫೀಕ್ ಕಾರಾಜೆ, ಹಾಫಿಳ್ ಗೂಡಿನಬಳಿ, ಸುಫಿಯಾನ್ ಪಾಣೆಮಂಗಳೂರು, ಅನಸ್ ಕಾರಾಜೆ, ಉನೈಫ್ ಸಜಿಪನಡು, ನಝೀಂ ಗೋಳಿಪಡ್ಪು, ಸಯ್ಯಿದ್ ಅಬ್ದುಲ್ ರಹಿಮಾನ್ ತಂಙಳ್ ಸವಣೂರು, ಶಮ್ಮಾಸ್ ಸವಣೂರು, ಸಿದ್ದೀಕ್ ಉಳ್ತೂರು, ಸಲ್ಮಾನ್ ಫಾರಿಶ್ ಕೈಕಂಬ, ರಿಝ್ವಾನ್ ಉಳ್ತೂರು, ಶಾನವಾಝ್ ತಲಪಾಡಿ ಅವರನ್ನು ನೇಮಿಸಲಾಯಿತು.
0 comments:
Post a Comment