ಬಿದ್ದು ಸಿಕ್ಕಿದ ದೊಡ್ಡ ಮೊತ್ತದ ನಗದನ್ನು ಶ್ರೀಕಾಂತ್ ಭಟ್ ಅವರಿಗೆ ಹಸ್ತಾಂತರಿಸಿ ಜವಾಬ್ದಾರಿ ನಿಭಾಯಿಸಿ ಮಾನವೀಯತೆ ಮೆರೆದ ಮದ್ರಸ ಅಧ್ಯಾಪಕ ಮಜೀದ್ ಫೈಝಿ - Karavali Times ಬಿದ್ದು ಸಿಕ್ಕಿದ ದೊಡ್ಡ ಮೊತ್ತದ ನಗದನ್ನು ಶ್ರೀಕಾಂತ್ ಭಟ್ ಅವರಿಗೆ ಹಸ್ತಾಂತರಿಸಿ ಜವಾಬ್ದಾರಿ ನಿಭಾಯಿಸಿ ಮಾನವೀಯತೆ ಮೆರೆದ ಮದ್ರಸ ಅಧ್ಯಾಪಕ ಮಜೀದ್ ಫೈಝಿ - Karavali Times

728x90

28 May 2024

ಬಿದ್ದು ಸಿಕ್ಕಿದ ದೊಡ್ಡ ಮೊತ್ತದ ನಗದನ್ನು ಶ್ರೀಕಾಂತ್ ಭಟ್ ಅವರಿಗೆ ಹಸ್ತಾಂತರಿಸಿ ಜವಾಬ್ದಾರಿ ನಿಭಾಯಿಸಿ ಮಾನವೀಯತೆ ಮೆರೆದ ಮದ್ರಸ ಅಧ್ಯಾಪಕ ಮಜೀದ್ ಫೈಝಿ

 ಬಂಟ್ವಾಳ, ಮೇ 28, 2024 (ಕರಾವಳಿ ಟೈಮ್ಸ್) : ಇಲ್ಲಿನ ಕೆಳಗಿನಪೇಟೆ ಮನಾರುಲ್ ಇಸ್ಲಾಂ ಮದ್ರಸ ಅಧ್ಯಾಪಕರೋರ್ವರು ರಸ್ತೆಯಲ್ಲಿ ಬಿದ್ದು ಸಿಕ್ಕಿದ ದೊಡ್ಡ ಮೊತ್ತದ ನಗದು ಹಣವನ್ನು ಅದರ ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಜೊತೆಗೆ ಜವಾಬ್ದಾರಿ ನಿಭಾಯಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. 

ಮದ್ರಸ ಅಧ್ಯಾಪಕರ ಅಬ್ದುಲ್ ಮಜೀದ್ ಫೈಝಿ ಅವರೇ ಪ್ರಾಮಾಣಿಕತೆ ಮೆರೆದು ಜವಾಬ್ದಾರಿ ನಿಭಾಯಿಸಿದ ಧರ್ಮಗುರುಗಳು. ಶ್ರೀಪತಿ ಶ್ರೀಕಾಂತ್ ಭಟ್ ಎಂಬವರೇ ಕಳೆದುಹೋದ ದೊಡ್ಡ ಮೊತ್ತದ ನಗದು ಹಣವನ್ನು ವಾಪಾಸು ಪಡೆದ ವಾರೀಸುದಾರ. 

ಫೈಝಿ ಅವರು ಮಂಗಳವಾರ ಬೆಳಗ್ಗಿನ ಮದ್ರಸ ತರಗತಿ ಮುಗಿಸಿದ ಬಳಿಕ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುತ್ತಿದ್ದ ಸಂದರ್ಭ ರಸ್ತೆಯಲ್ಲಿ ಸುಮಾರು 2.43 ಲಕ್ಷ ರೂಪಾಯಿ ನಗದು ಹಣದ ಕಟ್ಟು ಸಿಕ್ಕಿದೆ. ಇದನ್ನು ಅವರು ಮದ್ರಸ ಆಡಳಿತ ಸಮಿತಿಯವರ ಗಮನಕ್ಕೆ ತಂದು ವಾರೀಸುದಾರರನ್ನು ಪತ್ತೆ ಹಚ್ಚಿ ನಗದು ಹಣವನ್ನು ಅವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿದ್ದು ಸಿಕ್ಕಿದ ದೊಡ್ಡ ಮೊತ್ತದ ನಗದನ್ನು ಶ್ರೀಕಾಂತ್ ಭಟ್ ಅವರಿಗೆ ಹಸ್ತಾಂತರಿಸಿ ಜವಾಬ್ದಾರಿ ನಿಭಾಯಿಸಿ ಮಾನವೀಯತೆ ಮೆರೆದ ಮದ್ರಸ ಅಧ್ಯಾಪಕ ಮಜೀದ್ ಫೈಝಿ Rating: 5 Reviewed By: karavali Times
Scroll to Top