ಕುದ್ರೋಳಿ : ಹಿರಿಯ ಕಾಂಗ್ರೆಸ್ ಮುಖಂಡ ಯೂಸುಫ್ ಖಾದರ್ ನಿಧನ, ಗಣ್ಯರ ಸಂತಾಪ - Karavali Times ಕುದ್ರೋಳಿ : ಹಿರಿಯ ಕಾಂಗ್ರೆಸ್ ಮುಖಂಡ ಯೂಸುಫ್ ಖಾದರ್ ನಿಧನ, ಗಣ್ಯರ ಸಂತಾಪ - Karavali Times

728x90

11 May 2024

ಕುದ್ರೋಳಿ : ಹಿರಿಯ ಕಾಂಗ್ರೆಸ್ ಮುಖಂಡ ಯೂಸುಫ್ ಖಾದರ್ ನಿಧನ, ಗಣ್ಯರ ಸಂತಾಪ

 ಮಂಗಳೂರು, ಮೇ 12, 2024 (ಕರಾವಳಿ ಟೈಮ್ಸ್) : ದ.ಕ. ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಯೂಸುಫ್ ಖಾದರ್ (85) ಅವರು ವಯೋ ಸಹಜ ಅನಾರೋಗ್ಯದಿಂದ ಶನಿವಾರ ಕುದ್ರೋಳಿಯ  ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಯೂಸುಫ್ ಖಾದರ್ ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜಿಲ್ಲಾ  ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕುದ್ರೋಳಿ ವಾರ್ಡ್ ನಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ಝೀನತ್ ಬಕ್ಷ್ ಮಸೀದಿಯ ಚುನಾಯಿತ ಕಮಿಟಿ ಸದಸ್ಯರಾಗಿ, ಕುದ್ರೋಳಿಯ ಜಾಮಿಅ ಮಸ್ಜಿದ್ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗಣ್ಯರ ಸಂತಾಪ


 ಯೂಸುಫ್ ಖಾದರ್ ಕುದ್ರೋಳಿ ಅವರು ಜಿಲ್ಲಾ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ದಶಕಗಳ ಕಾಲ ದುಡಿದಿರುತ್ತಾರೆ. ಕುದ್ರೋಳಿಯ ಪಕ್ಷ ಸಂಘಟನೆಗೆ ಅವರ ಕೊಡುಗೆ ಅಪಾರ. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಮಾಜಿ ಸಚಿವರಾದ ಬಿ ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್.ಎಂ. ಅಡ್ಯಂತಾಯ, ಮೊಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ.ಆರ್. ಲೋಬೊ, ಐವನ್ ಡಿಸೋಜಾ, ಎಐಸಿಸಿ ಕಾರ್ಯದರ್ಶಿ ವಿ.ಪಿ. ಮೋಹನ್, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪದಾಧಿಕಾರಿಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಿಥುನ್ ರೈ, ರಕ್ಷಿತ್ ಶಿವರಾಂ, ಜಿ. ಕೃಷ್ಣಪ್ಪ, ಇನಾಯತ್ ಅಲಿ, ಎಂ.ಎಸ್. ಮೊಹಮ್ಮದ್, ಜಿ.ಎ. ಬಾವಾ, ಟಿ.ಎಂ. ಶಹೀದ್, ಲಾವಣ್ಯ ಬಳ್ಳಾಲ್, ಮುಖಂಡರಾದ ಹಾಜಿ ಬಿ.ಎಚ್. ಖಾದರ್, ಯು.ಕೆ. ಮೋನು, ರಾಕೇಶ್ ಮಲ್ಲಿ, ಡಾ. ರಘು ಸಳ್ಯ, ಸುರೇಶ್ ಬಳ್ಳಾಲ್, ಇಬ್ರಾಹಿಂ ಕೋಡಿಜಾಲ್, ಎಂ ಅಶ್ವನಿ ಕುಮಾರ್ ರೈ, ಶಶಿಧರ್ ಹೆಗ್ಡೆ,  ಕೆ. ಅಶ್ರಫ್, ಸದಾಶಿವ್ ಉಳ್ಳಾಲ್, ಮಮತಾ ಗಟ್ಟಿ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ಜೋಕಿಂ ಡಿಸೋಜ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ಮನೋಹರ್ ಶೆಟ್ಟಿ, ನಾರಾಯಣ್ ನಾಯ್ಕ್, ಮೋಹನ್ ಗೌಡ, ಮನೋರಾಜ್ ರಾಜೀವ, ಲಾರೆನ್ಸ್ ಡಿಸೋಜ, ಅಲಿಸ್ಟರ್,  ಡಾ. ಶೇಖರ್ ಪೂಜಾರಿ, ಶುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು, ಉಲ್ಲಾಸ್ ಕೋಟ್ಯಾನ್, ಚೇತನ್ ಬೆಂಗ್ರೆ, ಬಿ.ಎಂ. ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಕೌಶಲ್ ಪ್ರಸಾದ್ ಶೆಟ್ಟಿ, ಸುಹಾನ್ ಆಳ್ವ, ಪೂರ್ಣೇಶ್ ಭಂಡಾರಿ, ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸ್ ಲೋಟೊ ಪಿಂಟೊ, ಭಾಸ್ಕರ್ ಕೆ, ಅಬ್ದುಲ್ ರವೂಫ್, ಕೇಶವ ಮರೋಳಿ, ಜೆಸಿಂತಾ, ಎ.ಸಿ. ವಿನಯರಾಜ್, ಸಂಶುದ್ದೀನ್ ಕುದ್ರೋಳಿ, ಲತೀಫ್ ಕಂದಕ್,  ನವೀನ್ ಡಿ ಸೋಜ, ಅಶ್ರಫ್ ಬಜಾಲ್, ಶಬೀರ್ ಎಸ್, ಅನೀಲ್ ಕುಮಾರ್, ಝೀನತ್ ಸಂಶುದ್ದೀನ್ ಬಂದರ್, ನಝೀರ್ ಬಜಾಲ್, ವಹಾಬ್ ಕುದ್ರೋಳಿ, ಮಕ್ಬೂಲ್, ಯೂಸುಫ್ ಕರಂದಾಡಿ, ಸದಾಶಿವ ಬಂಗೇರ, ರಝಾಕ್ ಕುಕ್ಕಾಜೆ, ಶರೀಫ್ ಭೂಯಾ ಮೊದಲಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕುದ್ರೋಳಿ : ಹಿರಿಯ ಕಾಂಗ್ರೆಸ್ ಮುಖಂಡ ಯೂಸುಫ್ ಖಾದರ್ ನಿಧನ, ಗಣ್ಯರ ಸಂತಾಪ Rating: 5 Reviewed By: lk
Scroll to Top