ಬಂಟ್ವಾಳ, ಮೇ 23, 2024 (ಕರಾವಳಿ ಟೈಮ್ಸ್) : ದಾರಿಯಲ್ಲಿ ಬಾಗಿದ ಮರದ ಕೊಂಬೆಯನ್ನು ಮುರಿದು ಮುಂದಕ್ಕೆ ಸಾಗಿದ ವ್ಯಕ್ತಿಗೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಕೆ ನಾರಾಯಣ ನಾಯ್ಕ (67) ಅವರು ಪೊಲೀಸರಿಗೆ ದೂರು ನೀಡಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ ಇವರು ಮೇ 21 ರಂದು ಬೆಳಿಗ್ಗೆ ಮನೆಯಿಂದ ಹೊರಟು, ಕಲ್ಕಾಜೆ ಕೊಡಂಗೆ ಅಮೈಗೆ ಸಾರ್ವಜನಿಕರು ಹೋಗುವ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಕೊಳ್ನಾಡು ಗ್ರಾಮದ, ಮಂಕುಡೆ-ಕಲ್ಕಾಜೆ ಎಂಬಲ್ಲಿ ಆರೋಪಿತ ಗಣೇಶ್ ಶೆಟ್ಟಿ (48) ಎಂಬವರ ಮನೆಯ ಬಳಿ ದಾರಿ ಬದಿಯಲ್ಲಿದ್ದ, ಸಣ್ಣ ಮರದ ಕೊಂಬೆಯು ದಾರಿಗೆ ಬಾಗಿದ್ದುದ್ದನ್ನು, ಕೈಯಿಂದ ಮುರಿದು ಮುಂದಕ್ಕೆ ಹೋಗುವಾಗ, ಅರೋಪಿ ಗಣೇಶ್ ಶೆಟ್ಟಿ ಅವರನ್ನು ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ, ಅಪರಾಧ ಕ್ರಮಾಂಕ 91/2024 ಕಲಂ 504, 506 ಐಪಿಸಿ ಮತ್ತು ಕಲಂ 3(1)(ಆರ್) ಎಸ್ಸಿ-ಎಸ್ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment