ಪತ್ರಕರ್ತ ಲತೀಫ್ ನೇರಳಕಟ್ಟೆ ಅವರಿಗೆ ಪತ್ನಿ ವಿಯೋಗ : ಹಠಾತ್ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ನೂರ್ ಜಹಾನ್ ನಿಧನ - Karavali Times ಪತ್ರಕರ್ತ ಲತೀಫ್ ನೇರಳಕಟ್ಟೆ ಅವರಿಗೆ ಪತ್ನಿ ವಿಯೋಗ : ಹಠಾತ್ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ನೂರ್ ಜಹಾನ್ ನಿಧನ - Karavali Times

728x90

13 May 2024

ಪತ್ರಕರ್ತ ಲತೀಫ್ ನೇರಳಕಟ್ಟೆ ಅವರಿಗೆ ಪತ್ನಿ ವಿಯೋಗ : ಹಠಾತ್ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ನೂರ್ ಜಹಾನ್ ನಿಧನ

ಬಂಟ್ವಾಳ, ಮೇ 13, 2024 (ಕರಾವಳಿ ಟೈಮ್ಸ್) : ಪತ್ರಕರ್ತ, ವಾರ್ತಾಭಾರತಿ ಬಂಟ್ವಾಳ ವರದಿಗಾರ ಲತೀಫ್ ನೇರಳಕಟ್ಟೆ ಅವರ ಪತ್ನಿ ನೂರ್ ಜಹಾನ್ (40)  ಅವರು ಹೃದಯಾಘಾತದಿಂದ  ಸೋಮವಾರ ಅಪರಾಹ್ನ ನಿಧನರಾದರು. ಸೋಮವಾರ ಮಧ್ಯಾಹ್ನ ಸುಮಾರು 2.30 ರ ವೇಳೆಗೆ ಕಲ್ಲಡ್ಕದ ಮನೆಯಲ್ಲಿದ್ದ ವೇಳೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ತಂದೆ-ತಾಯಿ, ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

ಮೃತ ಶರೀರವನ್ನು ನೇರಳಕಟ್ಟೆಯ ಲತೀಫ್ ಅವರ ತರವಾಡು ಮನೆಗೆ ತರಲಾಗಿದ್ದು ರಾತ್ತಿ 10 ಗಂಟೆ ವೇಳೆಗೆ ಕೊಡಾಜೆ ಮಸೀದಿಯ ದಫನ ಭೂಮಿಯಲ್ಲಿ ದಫನ ಕಾರ್ಯ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ನೂರ್ ಜಹಾನ್ ಅವರ ಅಕಾಲಿಕ ನಿಧನಕ್ಕೆ ಕರಾವಳಿ ಟೈಮ್ಸ್ ಪತ್ರಿಕಾ ಬಳಗ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪತ್ರಕರ್ತ ಲತೀಫ್ ನೇರಳಕಟ್ಟೆ ಅವರಿಗೆ ಪತ್ನಿ ವಿಯೋಗ : ಹಠಾತ್ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ನೂರ್ ಜಹಾನ್ ನಿಧನ Rating: 5 Reviewed By: karavali Times
Scroll to Top