ಜೂನ್ 10 ರಂದು ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ - Karavali Times ಜೂನ್ 10 ರಂದು ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ - Karavali Times

728x90

31 May 2024

ಜೂನ್ 10 ರಂದು ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್

ಪುತ್ತೂರು, ಮೇ 31, 2024 (ಕರಾವಳಿ ಟೈಮ್ಸ್) : ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಅದಾಲತ್ ಜೂನ್ 10 ರಂದು ಪೂರ್ವಾಹ್ನ 11 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ  ನಡೆಯಲಿದೆ.

ಈ ಅದಾಲತ್ತಿನಲ್ಲಿ ಪುತ್ತೂರು ಅಂಚೆ ವಿಭಾಗದಿಂದ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವ ಅಂಚೆ ಪಿಂಚಣಿದಾರರ ಕುಂದು ಕೊರತೆಗಳನ್ನು ಪರಶೀಲಿಸಲಾಗುವುದು. ಕುಂದು ಕೊರತೆಗಳನ್ನು ಕಳುಹಿಸಲು ಬಯಸುವ ಇಚ್ಛಿಸುವ ಅಂಚೆ ಪಿಂಚಣಿದಾರರು ಬರಹ ಮೂಲಕ ಜೂನ್ 6 ರ ಮೊದಲು ತಲುಪುವಂತೆ ‘ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು-574201’ ಇವರಿಗೆ ‘ಪಿಂಚಣಿ ಅದಾಲತ್ ನಲ್ಲಿ ವಿಚಾರಣೆಗಾಗಿ’ ಎಂಬ ಮೇಲ್ಬರಹ ಹೊಂದಿದ ಲಕೋಟೆಯಲ್ಲಿ ಕಳುಹಿಸಬಹುದು. ಜೂನ್ 10 ರಂದು 11 ಗಂಟೆಗೆ ಕಚೇರಿಯಲ್ಲಿ ಹಾಜರಿದ್ದರೆ ಸಕ್ಷಮ ಪರಿಶೀಲನೆ ನಡೆಸಲು ಅನುಕೂಲವಾಗುವುದು ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜೂನ್ 10 ರಂದು ಪುತ್ತೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿ ಅದಾಲತ್ Rating: 5 Reviewed By: karavali Times
Scroll to Top